text
stringlengths
0
61.5k
“ಮನಸ್ಸನ್ನು ಸ್ವಚ್ಛ, ಬುದ್ಧಿಯನ್ನು ಕ್ಲಿಯರ್ ಆಗಿ ಇಟ್ಟುಕೊಂಡು ಡಬಲ್ ಲೈಟ್ ಫರಿಶ್ತಾ ಸ್ಥಿತಿಯ ಅನುಭವ ಮಾಡಿ”
ಇಂದು ಬಾಪ್ದಾದಾರವರು ತನ್ನ ಸ್ವರಾಜ್ಯ ಅಧಿಕಾರಿ ಮಕ್ಕಳನ್ನು ನೋಡುತ್ತಿದ್ದಾರೆ. ಸ್ವರಾಜ್ಯ ಬ್ರಾಹ್ಮಣ ಜೀವನದ ಜನ್ಮ ಸಿದ್ಧ ಅಧಿಕಾರವಾಗಿದೆ. ಬಾಪ್ದಾದಾರವರು ಪ್ರತಿಯೊಂದು ಬ್ರಾಹ್ಮಣನಿಗೂ ಸ್ವರಾಜ್ಯದ ಸಿಂಹಾಸನಾಧೀಶರನ್ನಾಗಿ ಮಾಡಿಬಿಟ್ಟಿದ್ದಾರೆ. ಸ್ವರಾಜ್ಯದ ಅಧಿಕಾರ ಜನ್ಮವಾಗುತ್ತಿದ್ದಂತೆಯೇ ಪ್ರತಿಯೊಂದು ಬ್ರಾಹ್ಮಣ ಆತ್ಮನಿಗೆ ಪ್ರಾಪ್ತಿಯಾಗಿದೆ. ಎಷ್ಟು ಸ್ವರಾಜ್ಯದ ಮೇಲೆ ಸ್ಥಿತರಾಗುತ್ತೀರಿ ಅ...
ಬಾಪ್ದಾದಾರವರು ಇಂದು ಪ್ರತಿಯೊಂದು ಮಗುವಿನ ಮಸ್ತಕದಲ್ಲಿ ಪ್ರಕಾಶದ ಕಿರೀಟವನ್ನು ನೋಡುತ್ತಿದ್ದಾರೆ. ಎಷ್ಟು ತಮ್ಮಲ್ಲಿ ಶಕ್ತಿಯನ್ನು ಧಾರಣೆ ಮಾಡಿಕೊಂಡಿದ್ದೀರಿ ಅಷ್ಟೇ ನಂಬರಿನಲ್ಲಿ ಪ್ರಕಾಶದ ಕಿರೀಟ ಹೊಳೆಯುತ್ತದೆ. ಬಾಪ್ದಾದಾರವರು ಎಲ್ಲಾ ಮಕ್ಕಳಿಗೂ ಸರ್ವಶಕ್ತಿಗಳನ್ನು ಅಧಿಕಾರದಲ್ಲಿ ಕೊಟ್ಟಿದ್ದಾರೆ. ಪ್ರತಿಯೊಬ್ಬರು ಮಾಸ್ಟರ್ ಸರ್ವ ಶಕ್ತಿವಂತರಾಗಿದ್ದಾರೆ, ಆದರೆ ಧಾರಣೆ ಮಾಡುವುದರಲ್ಲಿ ನಂಬರ್ವ...
ಡಬಲ್ ವಿದೇಶಿಯರಿಗೆ ಫಾಲೋ ಮಾಡಲು ಬರುತ್ತದೆಯೇ? ಫಾಲೋ ಮಾಡುವುದಂತೂ ಸಹಜವಾಗಿದೆ ಅಲ್ಲವೇ! ಫಾಲೋ ಮಾಡಬೇಕೆಂದರೆ ಏಕೆ, ಏನು, ಹೇಗೆ.... ಇದೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಹಾಗೂ ಎಲ್ಲರಿಗೂ ಅನುಭವವಿದೆ- ಏಕೆ, ಏನು, ಹೇಗೆ ಇದೆ ವ್ಯರ್ಥ ಸಂಕಲ್ಪಗಳ ನಿಮಿತ್ತ ಆಗಿದೆ, ಇದೆ ಆಧಾರವಾಗಿದೆ. ಫಾಲೋ ಫಾದರ್ ಮಾಡುವುದರಲ್ಲಿ ಈ ಶಬ್ದಗಳು ಸಮಾಪ್ತಿಯಾಗಿ ಬಿಡುತ್ತದೆ. ಹೇಗೆ ಎನ್ನುವುದಲ್ಲ ಹೀಗೆ! ಬುದ್ಧಿ ...
ಬಾಪ್ದಾದಾರವರು ಮೊದಲು ಸಹ ಹೇಳಿದ್ದರು- ಹೇಗೆ ಈಗ ನಿಮಗೆ ನಿಶ್ಚಯವಿದೆ ನಾನು ಬ್ರಹ್ಮಾಕುಮಾರಿ/ ಬ್ರಹ್ಮಾಕುಮಾರನಾಗಿದ್ದೇನೆ. ನಡೆಯುತ್ತಾ- ಓಡಾಡುತ್ತಾ- ಯೋಚಿಸುತ್ತ - ನಾನು ಬ್ರಹ್ಮಾಕುಮಾರಿ ಆಗಿದ್ದೇನೆ, ನಾನು ಬ್ರಹ್ಮಾಕುಮಾರ ಬ್ರಾಹ್ಮಣ ಆತ್ಮನಾಗಿದ್ದೇನೆ. "ನಾನು ಫರಿಶ್ತಾ ಆಗಿದ್ದೇನೆ" ಇದನ್ನು ಸ್ವಾಭಾವಿಕ ಸ್ಮೃತಿ ಹಾಗೂ ಸ್ವಭಾವವನ್ನಾಗಿ ಮಾಡಿಕೊಳ್ಳಿ. ಅಮೃತ ವೇಳೆ ಏಳುತ್ತಲೇ ಇದನ್ನು ಪಕ್ಕಾ...
ಬಾಪ್ದಾದಾರವರಿಗೆ ಪ್ರತಿಯೊಂದು ಮಗುವಿನ ಮೇಲೆ ಪ್ರೀತಿ ಇದೆ. ಒಂದು ಮಗುವನ್ನು ಸಹ ಕಡಿಮೆ ಎಂದು ತಿಳಿಯುವುದಿಲ್ಲ. ನಂಬರ್ವಾರ್ ಏಕೆ? ಎಲ್ಲರೂ ನಂಬರ್ ಒನ್ ಆಗಿಬಿಟ್ಟರೆ ಎಷ್ಟು ಚೆನ್ನಾಗಿರುತ್ತೆ. ಒಳ್ಳೆಯದು ಇಂದು ಬಹಳ ಗುಂಪುಗಳು ಬಂದಿದ್ದಾರೆ.
ಪ್ರಶಾಸಕ ವರ್ಗ (ಅಡ್ಮಿನಿಸ್ಟ್ರೇಟಿವ್ ವಿಂಗ್)ನ ಸಹೋದರ ಸಹೋದರಿಯರೊಂದಿಗೆ:- ಪರಸ್ಪರ ಸೇರಿಕೊಂಡು ಯಾವ ಪ್ರೋಗ್ರಾಮ್ ಮಾಡಿದ್ದೀರಿ? ಇಂತಹ ತೀವ್ರ ಪುರುಷಾರ್ಥದ ಯೋಜನೆಯನ್ನು ಮಾಡಿ ಯಾವುದರಿಂದ ಬೇಗ ನೀವು ಶ್ರೇಷ್ಠ ಆತ್ಮರ ಕೈಯಲ್ಲಿ ಈ ಕಾರ್ಯ ಬಂದು ಬಿಡಬೇಕು. ವಿಶ್ವ ಪರಿವರ್ತನೆ ಮಾಡಬೇಕೆಂದರೆ ಇಡೀ ಅಡ್ಮಿನಿಸ್ಟ್ರೇಷನ್ (ಪ್ರಶಾಸನ) ಬದಲಾಯಿಸಬೇಕಾಗುತ್ತದೆ ಅಲ್ಲವೇ! ಹೇಗೆ ಈ ಕಾರ್ಯ ಸಹಜವಾಗಿ ಮುಂದು...
ಎಲ್ಲಾ ವರ್ಗದವರಿಗೆ ಬಾಪ್ದಾದಾರವರು ಹೇಳುತ್ತಿದ್ದಾರೆ- ಹೇಗೆ ಈಗ ಧಾರ್ಮಿಕ ನಾಯಕರು ಬಂದರು, ಅವರು ನಂಬರ್ಒನ್ ಆಗಿರಲಿಲ್ಲ ಆದರೂ ಸಹ ಒಂದೇ ವೇದಿಕೆಯ ಮೇಲೆ ಎಲ್ಲರೂ ಒಟ್ಟಾದರೂ ಹಾಗೂ ಎಲ್ಲರ ಮುಖದಿಂದ ಬಂತು- ನಾವೆಲ್ಲರೂ ಸೇರಿಕೊಂಡು ಆಧ್ಯಾತ್ಮಿಕ ಶಕ್ತಿಯನ್ನು ಹರಡಿಸಬೇಕು. ಈ ರೀತಿ ಪ್ರತಿಯೊಂದು ವರ್ಗದವರು ಯಾರೆಲ್ಲಾ ಬಂದಿದ್ದೀರಿ, ಈ ಪ್ರತಿಯೊಂದು ವರ್ಗದವರು ಸಹ ಇಂತಹ ಫಲಿತಾಂಶವನ್ನು ತೆಗೆಯಬೇಕು...
ಎರಡನೆಯದು- ಆಧ್ಯಾತ್ಮಿಕತೆಯ ಅವಶ್ಯಕತೆ ಇದೆ ಹಾಗೂ ನಾವು ಸಹಯೋಗಿಗಳಾಗುತ್ತೇವೆ ಇಂತಹ ಫಲಿತಾಂಶವಿರಲಿ. ರೆಗುಲರ್ (ನಿಯಮಿತ) ವಿದ್ಯಾರ್ಥಿಗಳಾಗುವುದಿಲ್ಲ ಆದರೆ ಸಹಯೋಗಿ ಆಗಬಹುದು. ಇಲ್ಲಿಯವರೆಗೂ ಪ್ರತಿಯೊಂದು ವರ್ಗದವರಿಗೂ ಏನೆಲ್ಲ ಸೇವೆ ಮಾಡಿದ್ದೀರಿ, ಹೇಗೆ ಈಗ ಧಾರ್ಮಿಕ ನಾಯಕರನ್ನು ಕರೆದಿರಿ, ಇದೇ ರೀತಿ ಪ್ರತಿಯೊಂದು ದೇಶದಿಂದ ಪ್ರತಿಯೊಂದು ವರ್ಗದವರಿಗೆ ಮಾಡಿ. ಮೊದಲು ಭಾರತದಲ್ಲಿಯೇ ಮಾಡಿ, ನಂ...
ಮಧುಬನದವರು ಖಾಲಿಯಾಗಿ ಇರಬಾರದು. ಖಾಲಿಯಾಗಿರಲು ಬಯಸುತ್ತೀರಾ? ವ್ಯಸ್ತರಾಗಿರಲು ಬಯಸುತ್ತೀರಿ ಅಲ್ಲವೇ! ಅಥವಾ ದಣಿದು ಬಿಡುತ್ತೀರಾ? ಮಧ್ಯ ಮಧ್ಯದಲ್ಲಿ 15 ದಿನ ರಜೆಯೂ ಇರುತ್ತದೆ ಹಾಗೂ ಇರಲೇಬೇಕು. ಆದರೆ ಕಾರ್ಯಕ್ರಮದ ಹಿಂದೆ ಕಾರ್ಯಕ್ರಮ ಲಿಸ್ಟ್ನಲ್ಲಿ ಇರಬೇಕು ಆಗ ಉಮಂಗ ಉತ್ಸಾಹವಿರುತ್ತದೆ. ಇಲ್ಲವಾದರೆ ಯಾವಾಗ ಸೇವೆ ಇರುವುದಿಲ್ಲ ಎಂದರೆ ದಾದಿ ಒಂದು ದೂರನ್ನು ಕೊಡುತ್ತಾರೆ. ಯಾವ ದೂರು ಹೇಳಲೇ? ...
ಮೀಡಿಯಾ ವಿಂಗ್: ವಿದೇಶದಲ್ಲಿಯೂ ಮೀಡಿಯಾ ಶುರುವಾಗಿದೆ ಅಲ್ಲವೇ! ಬಾಪ್ದಾದಾರವರು ನೋಡಿದರೂ ಮೀಡಿಯಾದಲ್ಲಿ ಒಳ್ಳೆಯ ಪರಿಶ್ರಮ ಪಟ್ಟಿದ್ದೀರಿ. ಈಗ ನ್ಯೂಸ್ ಪೇಪರ್ನಲ್ಲಿ (ಸುದ್ದಿ ಪತ್ರಿಕೆಯಲ್ಲಿ) ಬರಲು ಶುರುವಾಗಿದೆ ಹಾಗೂ ಪ್ರೀತಿಯಿಂದ ಕೊಡುತ್ತಾರೆ. ಪರಿಶ್ರಮದ ಫಲವು ಸಿಗುತ್ತಿದೆ. ಈಗ ಇನ್ನೂ ವಿಶೇಷವಾಗಿ ಸುದ್ದಿ ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ ಸದಾ ಕಾಲಕ್ಕಾಗಿ ಸ್ವಲ್ಪ ಸಮಯ ಕೊಟ್ಟಿದ್ದಾರೆ!...
ನಾಲ್ಕಾರು ಕಡೆಯ ದೇಶ ವಿದೇಶದ ಸಹಕಾರ ಸ್ವರೂಪದಲ್ಲಿ ಅಥವಾ ಸೂಕ್ಷ್ಮ ಸ್ವರೂಪದಲ್ಲಿ ಮಿಲನ ಆಚರಿಸುವಂತಹ ಸರ್ವ ಸ್ವರಾಜ್ಯ ಅಧಿಕಾರಿ ಆತ್ಮಗಳಿಗೆ ಸದಾ ಈ ಶ್ರೇಷ್ಠ ಅಧಿಕಾರವನ್ನು ತಮ್ಮ ಚಲನೆ ಹಾಗೂ ಚಹರೆಯಿಂದ ಪ್ರತ್ಯಕ್ಷ ಮಾಡುವಂತಹ ವಿಶೇಷ ಆತ್ಮಗಳಿಗೆ, ಸದಾ ಬಾಪ್ದಾದಾರವರನ್ನು ಪ್ರತಿಯೊಂದು ಹೆಜ್ಜೆಯಲ್ಲಿ ಫಾಲೋ ಮಾಡುವಂತಹ, ಸದಾ ಮನಸ್ಸನ್ನು ಸ್ವಚ್ಛ ಹಾಗೂ ಬುದ್ಧಿಯನ್ನು ಸ್ಪಷ್ಟವಾಗಿಟ್ಟುಕೊಳ್ಳುವಂ...
ಓಂ ಶಾಂತಿ. ಈ ಹಾಡನ್ನು ಯಾರು ಹಾಡುತ್ತಿರುವರು? ಯಾರು ತಂದೆಯಿಂದ ಮೂರು ಜಗತ್ತಿನ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದಾರೆ. ತಮ್ಮಿಂದ ಏನೆಲ್ಲವೂ ಸಿಕ್ಕಿದೆಯೋ ಅದನ್ನ್ಯಾರೂ ದೂರಗೊಳಿಸಲು ಸಾಧ್ಯವಿಲ್ಲ. ನಮ್ಮನ್ನು ಯಾರೂ ದೂರಗೊಳಿಸಲು ಸಾಧ್ಯವಿಲ್ಲ ಅರ್ಥಾತ್ ಕಾಲ (ಮೃತ್ಯು) ಕಬಳಿಸಲು ಸಾಧ್ಯವಿಲ್ಲ. ಹಾಗೆಯೇ ನಮ್ಮ ರಾಜ್ಯವನ್ನೂ ಸಹ ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮಕ್ಕಳಿಗೆ ಗೊತ್ತಿದೆ - ನಾವು...
ತಂದೆಯು ಬಂದು ಮಕ್ಕಳಿಗೆ ಸಲಾಂ (ಗೌರವ) ಮಾಡುತ್ತಾರೆ. ಸಲಾಂ ಮಾಲೇಕಂ ಮಕ್ಕಳೆ. ಅದಕ್ಕೆ ಮಕ್ಕಳು ಹೇಳುತ್ತಾರೆ - ಮಾಲೇಕಂ ಸಲಾಂ. ನಾವಂತು ಕೇವಲ ಬ್ರಹ್ಮಾಂಡದ ಮಾಲೀಕರಾಗಿದ್ದೇವೆ, ನೀವು ಬ್ರಹ್ಮಾಂಡ ಹಾಗೂ ವಿಶ್ವ - ಇವೆರಡಕ್ಕೂ ಮಾಲೀಕರಾಗುತ್ತೀರಿ ಆದ್ದರಿಂದ ತಂದೆಯು ಮಕ್ಕಳಿಗೆ ಡಬಲ್ ಸಲಾಂ ಮಾಡುತ್ತಾರೆ. ಬೇಹದ್ದಿನ ತಂದೆಯೊಬ್ಬರೇ ನಿಮಗಾಗಿ ಎಷ್ಟೊಂದು ನಿಷ್ಕಾಮ ಸೇವೆ ಮಾಡುವರು. ಲೌಕಿಕ ತಂದೆಯು ನ...
ಆದ್ದರಿಂದ ಮೊಟ್ಟ ಮೊದಲು ಈ ಮಾತಿನ ತಿಳುವಳಿಕೆ ಕೊಡಬೇಕು - ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು? ಎಲ್ಲರೂ ಭಗವಂತನನ್ನು ನೆನಪು ಮಾಡುತ್ತಾರೆ. ಭಗವಂತನು ಹೇಳುತ್ತಾರೆ - ನನಗೆ ಎಲ್ಲಾ ಭಕ್ತರೂ ಪ್ರಿಯರಾಗಿದ್ದಾರೆ ಏಕೆಂದರೆ ಅವರೆಲ್ಲರಿಗೂ ನಾನೇ ಗತಿ-ಸದ್ಗತಿ ಕೊಡಬೇಕು. ಭಗವಂತನು ಬಂದು ಭಕ್ತರಿಗೆ ಭಕ್ತಿಯ ಫಲವನ್ನು ಕೊಡುತ್ತಾರೆ ಆದ್ದರಿಂದ ಭಕ್ತರು ಭಗವಂತನಿಗೆ ಪ್ರಿಯವರೆಂದು ಅವರು ತಿಳಿಯ...
ಈಗ ಬಾಬಾರವರು ಹೇಳುತ್ತಾರೆ - ಮಕ್ಕಳೇ, ನೀವು ಮನೆಗೆ ನಡೆಯಬೇಕಾಗಿದೆ ನಂತರ ಸ್ವರ್ಗದಲ್ಲಿ ಬಂದು ರಾಜ್ಯಾಡಳಿತ ಮಾಡಬೇಕಾಗಿದೆ. ಆತ್ಮರು ಪರಮಧಾಮದಿಂದ ಪಾತ್ರವನ್ನು ಅಭಿನಯಿಸುವುದಕ್ಕಾಗಿ ಬರುತ್ತಾರೆ, ನಂತರ ಎಲ್ಲಿಯವರೆಗೆ ಪತಿತ ಪಾವನನು ಬಂದು ಮುಕ್ತಗೊಳಿಸುವುದಿಲ್ಲವೋ ಅಲ್ಲಿಯವರೆಗೆ ಒಬ್ಬರೂ ಸಹ ಹೋಗಲು ಸಾಧ್ಯವಿಲ್ಲ. ಆದರೆ ಇಂತಹವರು ನಿರ್ವಾಣ ಗೈದರು ಎಂದು ಸುಳ್ಳು ಹೇಳುತ್ತಿರುತ್ತಾರೆ. ತಂದೆಯು ...
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಶ್ರೇಷ್ಠಾಚಾರಿ ಆಗುವುದಕ್ಕಾಗಿ ತಮ್ಮಲ್ಲಿರುವ ಸರ್ವ ಅವಗುಣಗಳನ್ನು ತೆಗೆದು, ಸದಾ ಶ್ರೀಮತದಂತೆ ನಡೆಯಬೇಕಾಗಿದೆ. ದೇಹಿ-ಅಭಿಮಾನಿಯಾಗಿದ್ದು ಬುದ್ಧಿಯಲ್ಲಿ ಜ್ಞಾನ ರತ್ನಗಳ ಧಾರಣೆ ಮಾಡಿಕೊಳ್ಳಬೇಕಾಗಿದೆ.
2. ತಾವು ಹೇಳುವುದು ಮತ್ತು ಮಾಡುವುದನ್ನು ಒಂದೇ ಸಮಾನ ಮಾಡಬೇಕಾಗಿದೆ. ಜ್ಞಾನದ ಧಾರಣೆಗಾಗಿ ಎಲ್ಲದರಿಂದ ಮೋಹ ತೆಗೆದು, ಒಬ್ಬ ತಂದೆಯಲ್ಲಿಯೇ ಮೋಹವನ್ನಿಡಬೇಕಾಗಿದೆ.
ಯೋಗಯುಕ್ತ-ಯುಕ್ತಿಯುಕ್ತರಾಗುವ ಯುಕ್ತಿ
ಇಂದು ಬಾಪ್ದಾದಾ ತನ್ನ ಸರ್ವ ಮಕ್ಕಳಲ್ಲಿ ವಿಶೇಷ ಎರಡು ಪ್ರಕಾರದ ಮಕ್ಕಳನ್ನು ನೋಡುತ್ತಿದ್ದಾರೆ. ಒಂದನೆಯ ಪ್ರಕಾರದವರು ಸದಾ ಯೋಗಯುಕ್ತರು ಮತ್ತು ಪ್ರತೀ ಮಾತಿನಲ್ಲಿ ಯುಕ್ತಿಯುಕ್ತರಾಗಿದ್ದಾರೆ. ಎರಡನೆಯವರು ಯೋಗಿಗಳಾಗಿದ್ದಾರೆ ಆದರೆ ಸದಾ ಯೋಗಯುಕ್ತರಲ್ಲ ಮತ್ತು ಸದಾ ಪ್ರತೀ ಕರ್ಮದಲ್ಲಿ ಸ್ವತಹ ಯುಕ್ತಿಯುಕ್ತರೂ ಅಲ್ಲ. ಮನಸ್ಸಾ-ವಾಚಾ ಹಾಗೂ ಕರ್ಮ - ಮೂರರಲ್ಲಿಯೂ ಕೆಲಕೆಲವೊಮ್ಮೆ ಕೆಲವೊಂದರಲ್ಲಿ ಯು...
ತಾವೆಲ್ಲಾ ಶ್ರೇಷ್ಠಾತ್ಮರು ಈ ರಥಕ್ಕೆ ಸಾರಥಿಯಾಗಿದ್ದೀರಿ, ರಥವನ್ನು ನಡೆಸುವಂತಹ ಆತ್ಮ ಸಾರಥಿಯಾಗಿದ್ದೀರಿ. ಈ ಸ್ಮೃತಿಯು ಸ್ವತಹವಾಗಿಯೇ ಈ ರಥ ಅಥವಾ ದೇಹದಿಂದ ಭಿನ್ನ ಮಾಡಿ ಬಿಡುತ್ತದೆ. ಯಾವುದೇ ಪ್ರಕಾರದ ದೇಹದ ಪರಿವೆಯಿಂದ ಭಿನ್ನ ಮಾಡಿ ಬಿಡುತ್ತದೆ. ದೇಹಭಾನವು ಇಲ್ಲವೆಂದರೆ ಸಹಜವಾಗಿ ಯೋಗಯುಕ್ತರಾಗಿ ಬಿಡುತ್ತೀರಿ ಮತ್ತು ಪ್ರತೀ ಕರ್ಮದಲ್ಲಿ ಯೋಗಯುಕ್ತ, ಯುಕ್ತಿಯುಕ್ತರು ಸ್ವತಹ ಆಗಿ ಬಿಡುತ್ತೀ...
ಸಾರಥಿ ಅರ್ಥಾತ್ ಆತ್ಮಾಭಿಮಾನಿ ಏಕೆಂದರೆ ಆತ್ಮನೇ ಸಾರಥಿಯಾಗಿದೆ, ಬ್ರಹ್ಮಾ ತಂದೆಯು ಈ ವಿಧಿಯಿಂದ ನಂಬರ್ವನ್ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಂಡರು ಆದ್ದರಿಂದ ತಂದೆಯೂ ಸಹ ಇವರಿಗೆ ಸಾರಥಿಯಾದರು. ಸಾರಥಿಯಾಗುವ ನೆನಪಾರ್ಥವನ್ನು ತಂದೆಯು ಮಾಡಿ ತೋರಿಸಿದರು. ಫಾಲೋ ಫಾದರ್ ಮಾಡಿರಿ. ಸಾರಥಿಯಾಗಿ ಸದಾ ಸಾರಥಿ ಜೀವನದಲ್ಲಿ ಅತಿ ಭಿನ್ನ ಮತ್ತು ಪ್ರಿಯ ಸ್ಥಿತಿಯನ್ನು ಅನುಭವ ಮಾಡಿಸಿದರು ಏಕೆಂದರೆ ದೇಹವನ್...
ಎಲ್ಲಾ ಟೀಚರ್ಸ್ಗೆ ತಂದೆಯೊಂದಿಗೆ ಎಷ್ಟು ಪ್ರೀತಿಯಿದೆ! ತಂದೆಯು ಸದಾ ಟೀಚರ್ಸ್ನ್ನು ತನ್ನ ಸೇವೆಯ ಸಮೀಪ ಜೊತೆಗಾರರೆಂದು ತಿಳಿಯುತ್ತೇವೆ ಅಂದಮೇಲೆ ಮೊದಲು ಟೀಚರ್ಸ್ ಫಾಲೋ ಮಾಡುತ್ತೀರಲ್ಲವೆ! ಇದರಲ್ಲಿ ಸದಾ ಇದೇ ಲಕ್ಷ್ಯವನ್ನು ಇಟ್ಟುಕೊಳ್ಳಿ - ``ಮೊದಲು ನಾನು''. ಈರ್ಷ್ಯೆಯಲ್ಲಿ ಮೊದಲು ನಾನು ಎಂಬುದಲ್ಲ, ಇದು ನಷ್ಟವನ್ನು ಉಂಟು ಮಾಡುತ್ತದೆ. ಶಬ್ಧವು ಅದೇ ಆಗಿದೆ - ``ಮೊದಲು ನಾನು'' ಆದರೆ ಒಂದಾಗ...
ಮುಂದೆ ಕುಳಿತುಕೊಳ್ಳುತ್ತೀರಿ ಅಂದಮೇಲೆ ಮುಂದೆ ಕುಳಿತುಕೊಳ್ಳಲು ಎಷ್ಟೊಂದು ಇಷ್ಟವಾಗುತ್ತದೆ. ಮತ್ತು ಸದಾ ಮುಂದುವರೆಯುವುದರಲ್ಲಿ ಎಷ್ಟು ಚೆನ್ನಾಗಿರುತ್ತದೆ! ಯಾವುದೇ ಇಂತಹ ಕಠಿಣ ಸಂಸ್ಕಾರವು ಹಿಂದೇಟಾಕುವ ಪ್ರಯತ್ನ ಮಾಡಿದರೆ ಆಗ ಈ ದೃಶ್ಯವನ್ನು ನೆನಪು ಮಾಡಿಕೊಳ್ಳಿ. ಯಾವಾಗ ಮುಂದೆ ಕುಳಿತುಕೊಳ್ಳಲು ಎಷ್ಟು ಚೆನ್ನಾಗಿರುತ್ತದೆ ಅಂದಮೇಲೆ ಮುಂದುವರೆಯುವುದರಲ್ಲಿ ನಾವೇಕೆ ಹಿಂದುಳಿಯಬೇಕು? ಯಾವುದೇ ...
ವಿದೇಶಿಯರು ಏನು ಮಾಡುತ್ತೀರಿ? ಫಾಲೋ ಫಾದರ್ ಮಾಡುತ್ತೀರಲ್ಲವೆ! ಎಲ್ಲಿಯತನಕ ತಲುಪುತ್ತೀರಿ? ಎಲ್ಲರೂ ಮುಂದೆ ಬರುತ್ತೀರಿ. ಯಾರೆಲ್ಲಾ ಬಂದಿದ್ದೀರೋ ಎಲ್ಲರೂ ಫಾಲೋ ಫಾದರ್ ಮಾಡಿ ಫಾಸ್ಟ್ ಮತ್ತು ಫಸ್ಟ್ ಬನ್ನಿರಿ. ಒಬ್ಬರೇ ಮೊಟ್ಟ ಮೊದಲಿಗೆ ಬರುವರು ಎಂದು ತಿಳಿಯಬೇಡಿ. ಫಸ್ಟ್ ಗ್ರೇಡ್ನಲ್ಲಂತೂ ಅನೇಕರಿರುವರಲ್ಲವೆ. ಫಸ್ಟ್ ನಂಬರಿನಲ್ಲಂತೂ ಬ್ರಹ್ಮಾ ತಂದೆಯು ಬರುವರು ಆದರೆ ಫಸ್ಟ್ ಗ್ರೇಡ್ನಲ್ಲಿ ಜೊತೆ...
ಸದಾ ಬ್ರಹ್ಮಾ ತಂದೆಯನ್ನು ಫಾಲೋ ಮಾಡುವವರು, ಸದಾ ಸ್ವತಹ ಯೋಗಯುಕ್ತ-ಯುಕ್ತಿಯುಕ್ತರಾಗಿರುವವರು, ಸದಾ ಸಾರಥಿಯಾಗಿ ಕರ್ಮೇಂದ್ರಿಯಗಳನ್ನು ಶ್ರೇಷ್ಠ ಮಾರ್ಗದಲ್ಲಿ ನಡೆಸುವವರು, ಸದಾ ಗುರಿಯ ಸಮೀಪ ಇರುವವರು ಇಂತಹ ಸರ್ವ ಶ್ರೇಷ್ಠ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಅವ್ಯಕ್ತ ಬಾಪ್~ದಾದಾರವರ ಜೋನ್ ಪ್ರಕಾರ ಉಚ್ಛರಿಸಲ್ಪಟ್ಟ ಮಹಾವಾಕ್ಯಗಳು - ಇಂದೋರ್ ಜೋನ್ ಗ್ರೂಪ್:
ಬಾಪ್ದಾದಾರವರ ಶ್ರೇಷ್ಠ ಮತವು ಶ್ರೇಷ್ಠ ಗತಿಯನ್ನು ಪ್ರಾಪ್ತಿ ಮಾಡಿಸಿತು - ಇಂತಹ ಅನುಭವ ಮಾಡುತ್ತೀರಲ್ಲವೆ! ಮತದಂತೆ ಗತಿಯಾಗುತ್ತದೆ ಅಂದಮೇಲೆ ತಂದೆಯ ಶ್ರೇಷ್ಠ ಮತವಿದೆಯೆಂದರೆ ಗತಿಯೂ ಶ್ರೇಷ್ಠವಾಗಿ ಇರುತ್ತದೆಯಲ್ಲವೇ! ಹೇಗೆ ಅಂತ್ಯ ಮತಿ ಸೊ ಗತಿ ಎಂದು ಹೇಳುತ್ತಾರೆ..... ಈ ರೀತಿ ಏಕೆ ಮಹಿಮೆ ಮಾಡಲಾಗಿದೆ? ಏಕೆಂದರೆ ತಂದೆಯವರು ಚಕ್ರದ ಅಂತಿಮದಲ್ಲಿಯೇ ಬಂದು ಶ್ರೇಷ್ಠ ಮತವನ್ನು ಕೊಡುತ್ತಾರೆ ಅಂದ...
ಅಂದಮೇಲೆ ಅಮೃತವೇಳೆಯಿಂದ ರಾತ್ರಿಯವರೆಗೆ ಏನೆಲ್ಲಾ ಕರ್ಮವನ್ನು ಮಾಡುತ್ತೀರಿ, ನೆನಪಿನ ವಿಧಿಪೂರ್ವಕವಾಗಿ ಮಾಡಿದಾಗ ಪ್ರತೀ ಕರ್ಮದ ಸಿದ್ಧಿಯು ಸಿಗುವುದು. ಸಿದ್ಧಿ ಎಂದರೆ ಪ್ರತ್ಯಕ್ಷಫಲದ ಪ್ರಾಪ್ತಿಯಾಗುತ್ತಾ ಇರುತ್ತದೆ. ಅತಿ ಶ್ರೇಷ್ಠವಾದ ಸಿದ್ಧಿಯೆಂದರೆ ಪ್ರತ್ಯಕ್ಷಫಲದ ರೂಪದಲ್ಲಿ ಅತೀಂದ್ರಿಯ ಸುಖದ ಅನುಭೂತಿಯಾಗುವುದು. ಸದಾ ಸುಖದ ಪ್ರಕಂಪನಗಳಲ್ಲಿ, ಖುಷಿಯ ಪ್ರಕಂಪನಗಳಲ್ಲಿ ತೇಲಾಡುತ್ತಾ ಇರುವಿ...
ಇಂದೋರ್ ಜೋನಿನವರೆಲ್ಲರೂ ಸಂತುಷ್ಟವಾಗಿದ್ದೀರಲ್ಲವೆ, ಮಾತೆಯರು ಸದಾ ಸಂತುಷ್ಟವಾಗಿ ಇದ್ದೀರಾ? ಕೆಲವೊಮ್ಮೆ ಪರಿವಾರದಲ್ಲಿ ಲೌಕಿಕದಿಂದ ಅಸಂತುಷ್ಟರಂತು ಆಗುವುದಿಲ್ಲವೇ? ಕೆಲವೊಮ್ಮೆ ಬೇಸರವಾಗುತ್ತದೆಯೇ? ಕೆಲವೊಮ್ಮೆ ಚಂಚಲವಿರುವ ಮಕ್ಕಳಿಂದ ಬೇಸರವಾಗುವುದಿಲ್ಲವೇ? ಎಂದಿಗೂ ಸಹ ಬೇಸರವಾಗಬಾರದು, ತಾವೆಷ್ಟು ಬೇಸರವಾಗುವಿರಿ, ಅವರು ಅಷ್ಟೇ ಬೇಸರ ಪಡಿಸುವರು. ಆದ್ದರಿಂದ ನಿಮಿತ್ತರಾಗಿದ್ದು, ಸೇವಾಧಾರಿಯಾ...
ಡಬಲ್ ವಿದೇಶಿಗಳೂ ಸಹ ಅಗಲಿ ಮರಳಿ ಸಿಕ್ಕಿರುವವರು, ಸ್ವಲ್ಪವೇ ಇದ್ದಾರೆ. ಇದರಲ್ಲೆಷ್ಟು ಖುಷಿಯಿರುತ್ತದೆ ಎಂಬುದನ್ನು ವರ್ಣನೆ ಮಾಡಬಲ್ಲಿರಾ? ಬೇಹದ್ದಿನ ತಂದೆಯಾಗಿದ್ದಾರೆ ಅಂದಮೇಲೆ ಪ್ರಾಪ್ತಿಯೂ ಬೇಹದ್ದಿನದಾಗಿದೆ ಆದ್ದರಿಂದ ಅದ್ದನ್ನು ಎಣಿಕೆ ಮಾಡಲು ಸಾಧ್ಯವಿಲ್ಲ. ಬಾಪ್ದಾದಾರವರಂತು ಡಬಲ್ ವಿದೇಶಿ ಮಕ್ಕಳನ್ನು ತೀವ್ರ ಪುರುಷಾರ್ಥಿಯ ಲೆಕ್ಕದಿಂದ ನೋಡಿ ಖುಷಿಯಾಗುವರು. ಭಾರತವಾಸಿಗಳಂತು ಭಾರತದ ಮಾ...
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಆತ್ಮಿಕ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಸ್ಪಿರಿಚ್ಯುಯಲ್ ಚಿಲ್ಡ್ರನ್ ಎಂದು ಹೇಳಲಾಗುತ್ತದೆ. ಸ್ಪಿರಿಚ್ಯುಯಲ್ ಫಾದರ್ ಮತ್ತು ಸ್ಪಿರಿಚ್ಯುಯಲ್ ಚಿಲ್ಡ್ರನ್. ಈಗ ಇದಂತೂ ಆತ್ಮಿಕ ಮಕ್ಕಳಿಗೆ ತಿಳಿದಿದೆ - ನಾವಾತ್ಮರಿಗೆ ಅಲ್ಲಿ ಶರೀರವಿರುವುದಿಲ್ಲ, ಆದ್ದರಿಂದ ಅಲ್ಲಿ ಯಾವುದೇ ವಾರ್ತಾಲಾಪ ನಡೆಯುವುದಿಲ್ಲ. ಯಾವಾಗ ಇಬ್ಬರಿಗೂ ಶರೀರವ...
ಆತ್ಮಿಕ ತಂದೆಯು ಆತ್ಮಿಕ ಸರ್ಜನ್ ಎಂದು ಹೇಳಲಾಗುತ್ತದೆ ಏಕೆಂದರೆ ನೆನಪು ಅಥವಾ ಯೋಗವನ್ನು ಕಲಿಸುತ್ತಾರೆ, ಇದರಿಂದ ನಾವಾತ್ಮರು ಸದಾ ನಿರೋಗಿಗಳಾಗಿ ಬಿಡುತ್ತೇವೆ. 21 ಜನ್ಮಗಳವರೆಗೆ ಎಂದೂ ರೋಗಿಗಳಾಗುವುದಿಲ್ಲ ನಂತರ ಮಾಯಾರಾಜ್ಯವಾದಾಗ ನಾವು ರೋಗಿಗಳಾಗಿ ಬಿಡುತ್ತೇವೆ. ತಂದೆಯು ಬಂದು ನಮ್ಮನ್ನು 21 ಜನ್ಮಗಳಿಗಾಗಿ ನಿರೋಗಿಗಳನ್ನಾಗಿ ಮಾಡುತ್ತಾರೆ. ತಂದೆಗೆ ಯಾತ್ರೆಯನ್ನು ಕಲಿಸುವಂತಹ ಮಾರ್ಗದರ್ಶಕನೆ...
ನೀವು ತಿಳಿದುಕೋಂಡಿದ್ದೀರಿ - ಕಲ್ಪದ ಮೊದಲೂ ಸಹ ಆತ್ಮಿಕ ತಂದೆಯಿಂದ ನಾವು ಆತ್ಮಿಕ ಜ್ಞಾನವನ್ನು ಕೇಳಿದ್ದೆವು. ಕಲ್ಪ-ಕಲ್ಪವೂ ಕೇಳುತ್ತಾ ಇರುತ್ತೇವೆ, ನತಿಂಗ್‍ನ್ಯೂ. ಇದನ್ನು ತಂದೆಯೇ ತಿಳಿಸುತ್ತಾರೆ - ಬೀಜಕ್ಕೆ ವೃಕ್ಷದ ಜ್ಞಾನವಿರುತ್ತದೆಯಲ್ಲವೆ. ತಂದೆಯು ನಿಮ್ಮನ್ನು ತ್ರಿಕಾಲದರ್ಶಿಗಳನ್ನಾಗಿ ಮಾಡಲು ಬರುತ್ತಾರೆ. ಮೂರುಕಾಲಗಳ ಜ್ಞಾನವನ್ನು ಕೊಡುತ್ತಾರಲ್ಲವೆ. ನಿಮ್ಮನ್ನು ಜೀವಿಸಿದ್ದಂತೆಯೇ ದ...
ನೀವು ಮಕ್ಕಳು ಈಗ ಬುದ್ಧಿವಂತರಾಗಿದ್ದೀರಿ. ಚಲನೆಯಿಂದಲೇ ಇವರು ಎಷ್ಟು ಮಧುರವಾಗಿದ್ದಾರೆ, ಇವರಿಗೆ ಎಷ್ಟು ಚೆನ್ನಾಗಿ ಧಾರಣೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ತಂದೆಯು ಯಾವ ವಿಷಯಗಳನ್ನು ತಿಳಿಸುತ್ತಾರೆಯೋ ಅದನ್ನು ಬರೆದಿಟ್ಟುಕೊಳ್ಳಬೇಕು, ಇಂದು ಯಾತ್ರೆಯ ವಿಷಯದ ಬಗ್ಗೆ ತಿಳಿಸಬೇಕು. ಯಾತ್ರೆಯು ಎರಡು ಪ್ರಕಾರದ್ದಿರುತ್ತದೆ, ಇದು ನಂಬರ್‍ವನ್ ವಿಷಯವಾಗಿದೆ. ಮನುಷ್ಯರೆಲ್ಲರೂ ಭಕ್ತ...
ತಂದೆಯು ತಿಳಿಸಿದ್ದಾರೆ - ಅರ್ಧಕಲ್ಪ ದಿನ, ಅರ್ಧಕಲ್ಪ ರಾತ್ರಿಯಾಗುತ್ತದೆ, ಇದೂ ಸಹ ಬ್ರಾಹ್ಮಣರ ಮಾತಾಗಿದೆ. ಬ್ರಾಹ್ಮಣರೇ ಮತ್ತೆ ದೇವತೆಗಳಾಗುತ್ತೀರಿ. ಹೊಸ ಪ್ರಪಂಚದಲ್ಲಿ ಲಕ್ಷ್ಮೀ-ನಾರಾಯಣರು ಎಲ್ಲಿಂದ ಬಂದರು? ಯಾವುದೇ ಯುದ್ಧವನ್ನಂತೂ ಮಾಡಲಿಲ್ಲ. ಮಹಾಭಾರತ ಯುದ್ಧವನ್ನು ತೋರಿಸುತ್ತಾರೆ ಆದರೆ ನಂತರ ಅದರ ಫಲಿತಾಂಶ ಏನನ್ನೂ ತೋರಿಸುವುದಿಲ್ಲ. ಪಂಚ ಪಾಂಡವರಿದ್ದರು ಎಂದು ಹೇಳುತ್ತಾರೆ, ನೀವು ಎಷ್...
ತಂದೆಯು ತಿಳಿಸುತ್ತಾರೆ - ಇದು ಸೃಷ್ಟಿಚಕ್ರವಾಗಿದೆ. ಇದರ ನಾಲ್ಕೂ ಭಾಗಗಳು ಸರಿಸಮವಾಗಿವೆ. ಒಂದುವೇಳೆ ಇದರ ಆಯಸ್ಸು ಲಕ್ಷಾಂತರ ವರ್ಷಗಳಾಗಿದ್ದರೆ ಮನುಷ್ಯರು ಹೆಚ್ಚಾಗಿ ಬಿಡುತ್ತಿದ್ದರು. ಜನಸಂಖ್ಯೆಯು ಕಡಿಮೆಯಾಗಬೇಕೆಂದು ಸರ್ಕಾರವೂ ಸಹ ಹೇಳುತ್ತದೆ ಆದರೆ ಇದು ತಂದೆಯ ಕೆಲಸವಾಗಿದೆ. ಮನುಷ್ಯರೆಲ್ಲರೂ ದೈಹಿಕ ಯುಕ್ತಿಗಳನ್ನೇ ರಚಿಸುತ್ತಿರುತ್ತಾರೆ. ತಂದೆಯದು ಇದು ಆತ್ಮಿಕ ಯುಕ್ತಿಯಾಗಿದೆ. ತಂದೆಯು ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಾವು ಬುದ್ಧಿವಂತರಾಗಿ ಅನ್ಯರನ್ನೂ ಮಾಡಬೇಕಾಗಿದೆ. ತಮ್ಮ ಚಲನೆಯನ್ನು ಬಹಳ ರಾಯಲ್ ಮತ್ತು ಮಧುರವಾಗಿಟ್ಟುಕೊಳ್ಳಬೇಕಾಗಿದೆ.
2. ಆತ್ಮಿಕ ಯಾತ್ರೆಯಲ್ಲಿ ತತ್ಪರರಾಗಿರಬೇಕಾಗಿದೆ. ತಮ್ಮ ಬಳಿ ಒಳ್ಳೊಳ್ಳೆಯ ವಿಷಯಗಳನ್ನು ಬರೆದಿಟ್ಟುಕೊಳ್ಳಬೇಕು. ಒಂದೊಂದು ವಿಷಯದ ಮೇಲೆ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ.
ಓಂ ಶಾಂತಿ. ಮಕ್ಕಳಿಗೆ ಈಗ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಂತೂ ಬುದ್ಧಿಯಲ್ಲಿದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ - ನಾವು ಭಾರತವಾಸಿಗಳು ಮೊಟ್ಟ ಮೊದಲು ಸತ್ಯಯುಗದಲ್ಲಿ ಸತೋಪ್ರಧಾನರಾಗಿದ್ದೆವು. ಈ ನೆನಪು ಮಕ್ಕಳಿಗಾಗಿ ಬಹಳ ಅವಶ್ಯವಾಗಿದೆ. ಪ್ರತೀಕ್ಷಣ ನೆನಪಿನ ಯಾತ್ರೆಯಲ್ಲಿರಬೇಕು. ಇದರಲ್ಲಿ ಬಹಳ ಪರಿಶ್ರಮ ಪಡಬೇಕು ಆದರೆ ರಚಯಿತ ಮತ್ತು ರಚನೆಯ ಜ್ಞಾನವಂತೂ ಬುದ್ಧಿಯಲ್ಲಿರಬೇಕ...
ನಾವೀಗ ಜಮಾ ಮಾಡಿಕೊಳ್ಳುತ್ತಿದ್ದೇವೆಂದು ನಿಮಗೆ ತಿಳಿದಿದೆ. ಪವಿತ್ರರಾಗಿ ಎಷ್ಟು ಸಂಪಾದನೆ ಮಾಡಿಕೊಳ್ಳುವಿರೋ ಅಷ್ಟು ಜಮಾ ಆಗುತ್ತದೆ. ಪುರುಷಾರ್ಥ ಮಾಡದಿದ್ದರೆ ಏನೂ ಜಮಾ ಆಗುವುದಿಲ್ಲ, ನಷ್ಟವುಂಟಾಗುವುದು. ನೀವು ತಿಳಿದುಕೊಂಡಿದ್ದೀರಿ - ಅರ್ಧಕಲ್ಪ ನಾವು ನಷ್ಟ ಹೊಂದುತ್ತಲೇ ಬಂದಿದ್ದೇವೆ, ಈಗ ಸಂಪೂರ್ಣ ದಿವಾಳಿಯಾಗಿ ಬಿಟ್ಟಿದ್ದೇವೆ, ಪ್ರತೀ ಮಾತಿನಲ್ಲಿ ದಿವಾಳಿ. ಈಗ ಮಕ್ಕಳು 21 ಜನ್ಮಗಳಿಗಾಗಿ ...
ಇದು ನಿಮ್ಮ ಈಶ್ವರೀಯ ಮೆಷಿನ್ ಆಗಿದೆ. ಸೇವಾಕೇಂದ್ರಗಳು ತೆರೆಯುತ್ತಾ ಹೋಗುತ್ತವೆ, ಈಗ ವಿನಾಶವೂ ಸನ್ಮುಖದಲ್ಲಿ ನಿಂತಿದೆ. ಈ ಕಣ್ಣುಗಳಿಂದ ಏನೆಲ್ಲಾ ನೋಡುತ್ತೀರೋ ಅದೆಲ್ಲವೂ ಸತ್ಯಯುಗದಲ್ಲಿ ಇರುವುದಿಲ್ಲ, ಅರಣ್ಯವಾಗಿ ಬಿಡುವುದು. ಅಬುಪರ್ವತವು ಸತ್ಯಯುಗದಲ್ಲಿರುವುದಿಲ್ಲ, ಅದರ ಅವಶ್ಯಕತೆಯೇ ಇಲ್ಲ. ಈ ಮಂದಿರ ಇತ್ಯಾದಿಗಳೆಲ್ಲವೂ ನಂತರ ಭಕ್ತಿಮಾರ್ಗದಲ್ಲಿ ಮಾಡಲ್ಪಡುತ್ತವೆ. ಎಷ್ಟು ಎತ್ತರದ ಪರ್ವತಗ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಒಳಗೆ ಯಾವುದೇ ಕೊರತೆಯಿದ್ದರೆ ಅದನ್ನು ತೆಗೆಯಬೇಕಾಗಿದೆ, ಸತ್ಯ ಹೃದಯವನ್ನಿಟ್ಟುಕೊಳ್ಳಬೇಕಾಗಿದೆ. ದೇಹಾಭಿಮಾನದಲ್ಲಿ ಬಂದು ಎಂದೂ ಕ್ರೋಧ ಮಾಡಬಾರದು.
2. ಸಮಯ ಸಿಕ್ಕಿದರೆ ಸಾಕು ನೆನಪಿನ ಯಾತ್ರೆಯಲ್ಲಿದ್ದು ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ.
ಓಂ ಶಾಂತಿ. ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ಓಂ ಶಾಂತಿಯ ಅರ್ಥವನ್ನು ತಿಳಿಸಿದ್ದಾರೆ. ಓಂ ಎಂದರೆ ನಾನು ಎಂದು ಹೇಳಲಾಗುತ್ತದೆ. ನಾನಾತ್ಮ, ನನ್ನದು ಶರೀರ ಎರಡು ವಸ್ತುಗಳಿವೆ. ಓಂ ಶಾಂತಿ ಅರ್ಥಾತ್ ಶಾಂತಿಯು ನನ್ನ ಸ್ವಧರ್ಮವಾಗಿದೆ ಎಂದು ಆತ್ಮವು ಹೇಳಿತು. ಆತ್ಮದ ನಿವಾಸ ಸ್ಥಾನವು ಶಾಂತಿಧಾಮ ಅಥವಾ ಪರಮಧಾಮವಾಗಿದೆ, ಅದು ನಿರಾಕಾರಿ ಪ್ರಪಂಚವಾಗಿದೆ. ಇದು ಸಾಕಾರಿ ಮನುಷ್ಯರ ಪ್ರಪಂಚವಾಗಿದೆ. ...
ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಿದ್ದೆನು, ಇಂದಿಗೆ 5000 ವರ್ಷಗಳಾಯಿತು. ಮೊದಲು ನೀವು ಬಹಳ ಸಾಹುಕಾರರಾಗಿದ್ದಿರಿ, ಇಡೀ ವಿಶ್ವದ ಮಾಲೀಕರಾಗಿದ್ದಿರಿ ಅಂದಮೇಲೆ ಅವಶ್ಯವಾಗಿ ಭಗವಂತನೇ ಈ ರೀತಿ ಮಾಡಿರುವರು. ಭಗವಾನುವಾಚ - ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ ಅಂದಮೇಲೆ ಅವಶ್ಯವಾಗಿ ರಾಜರೂ ಆಗುತ್ತಾರೆ, ಪ್ರಜೆಗಳೂ ಆಗುತ್ತಾರೆ. ಅರ್ಧಕಲ್...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಎಂದೂ ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ನನ್ನವರು ಒಬ್ಬ ಶಿವ ತಂದೆಯ ವಿನಃ ಮತ್ತ್ಯಾರೂ ಇಲ್ಲ, ಈ ಪಾಠವನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ.
2. ತಂದೆಯ ಸಮಾನ ಆತ್ಮಿಕ ಮಾರ್ಗದರ್ಶಕರಾಗಿ ಎಲ್ಲರಿಗೆ ಮನೆಯ ಮಾರ್ಗವನ್ನು ತಿಳಿಸಬೇಕಾಗಿದೆ. ಅಂಧರಿಗೆ ಊರುಗೋಲಾಗಬೇಕಾಗಿದೆ.
ಓಂ ಶಾಂತಿ. ಈ ಸಮಯದ ಮನುಷ್ಯರ ಜೀವನಕ್ಕೆ ಅಮೂಲ್ಯ ಜೀವನವೆಂದು ಹೇಳಲಾಗುತ್ತದೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ ಮತ್ತು ತಂದೆಯೂ ತಿಳಿಸುತ್ತಾರೆ - ಇದು ನಿಮ್ಮ ಅಂತಿಮ ಮನುಷ್ಯ ಜನ್ಮವಾಗಿದೆ. ಇದು ಬಹಳ ಅಮೂಲ್ಯವಾಗಿದೆ, ಇದಕ್ಕೆ ಯಾರೂ ಮೌಲ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಹಾಗೆಯೇ ಈ ಸಮಯವೂ ಸಹ ಬಹಳ ಅಮೂಲ್ಯವಾಗಿದೆ, ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಈಗ ಕವಡೆಯಿಂದ ವಜ್ರ ಸಮಾನರು, ಭಿಕಾ...
ಇದು ಮೃತ್ಯುಲೋಕದ ಅಂತಿಮ ಜನ್ಮವಾಗಿದೆ. ಅಮರಲೋಕದಲ್ಲಿ ಜೀವನ್ಮುಕ್ತಿಯಿರುತ್ತದೆ. ಮೃತ್ಯುಲೋಕದಲ್ಲಿ ಜೀವನ ಬಂಧನವಾಗಿದೆ. ಇದು ಭಾಗವತದಲ್ಲಿಯೂ ಇದೆ. ಜನಕನಿಗೆ ಜ್ಞಾನ ಕೊಡುವವರು ಯಾರೂ ಸಿಗಲಿಲ್ಲ ಎಂದು ಒಂದು ಕಥೆಯನ್ನು ಬರೆದು ಬಿಟ್ಟಿದ್ದಾರೆ. ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಜ್ಞಾನವನ್ನು ಕೊಡುತ್ತಾರೆ, ಇದನ್ನೇ ಬ್ರಹ್ಮಜ್ಞಾನವೆಂದು ಹೇಳಲಾಗುತ್ತದೆ. ಬ್ರಹ್ಮನಿಗೂ ಸಹ ಅವಶ್ಯವಾಗಿ ಯಾರಾದ...
ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಇಂದು ಬಹಳ ಗುಹ್ಯ ಮಾತುಗಳನ್ನು ತಿಳಿಸುತ್ತೇನೆ. ತಂದೆಯನ್ನು ಅರಿತುಕೊಂಡಿರಿ ಮತ್ತು ಜೀವನ್ಮುಕ್ತಿಗೆ ಹಕ್ಕುದಾರರಾಗಿಯೇ ಬಿಡುತ್ತೀರಿ. ಜ್ಞಾನದ ವಿನಾಶವೆಂದೂ ಆಗುವುದಿಲ್ಲ. ಕೆಲವು ಮನುಷ್ಯರು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ಇನ್ನೂ ಕೆಲವರು ಏನನ್ನೂ ತಿಳಿದುಕೊಳ್ಳುವುದಿಲ್ಲ. ಹಾಗೆಯೇ ನೋಡಿಕೊಂಡು ಹೊರಟು ಹೋಗುತ್ತಾರೆ. ಕೆಲವರು ನಾವು ಖಂಡಿತ ಬರುತ್...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತನ್ನ ಹಾಗೂ ಅನ್ಯರ ಜೀವನವನ್ನು ವಜ್ರ ಸಮಾನವನ್ನಾಗಿ ಮಾಡುವ ಸೇವೆ ಮಾಡುತ್ತಾ ಇರಬೇಕಾಗಿದೆ. ಸಮಯ, ಹಣ, ಶಕ್ತಿಯನ್ನು ವ್ಯರ್ಥವಾಗಿ ಕಳೆಯಬಾರದು.
2. ಅನ್ಯರ ಕಲ್ಯಾಣ ಮಾಡುವುದರ ಜೊತೆ ಜೊತೆಗೆ ತಮ್ಮ ಕಲ್ಯಾಣವನ್ನೂ ಮಾಡಿಕೊಳ್ಳಬೇಕಾಗಿದೆ. ಬುದ್ಧಿರೂಪಿ ಜೋಳಿಗೆಯಲ್ಲಿ ಜ್ಞಾನ ರತ್ನಗಳನ್ನು ಧಾರಣೆ ಮಾಡಿಕೊಂಡು ದಾನ ಮಾಡಬೇಕಾಗಿದೆ.
ಓಂ ಶಾಂತಿ. ಆತ್ಮಿಕ ಮಕ್ಕಳು ತಿಳಿದುಕೊಂಡಿದ್ದೀರಿ. ಈಗ ಆ ದಿನವು ಮತ್ತೆ ಬಂದಿದೆ. ಯಾವ ದಿನ? ಇದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ - ಭಾರತದಲ್ಲಿ ಮತ್ತೆ ಸ್ವರ್ಗದ ಆದಿ ಸನಾತನ ದೇವಿ-ದೇವತಾ ಧರ್ಮವು ಸ್ಥಾಪನೆಯಾಗುತ್ತದೆ ಅರ್ಥಾತ್ ಲಕ್ಷ್ಮೀ-ನಾರಾಯಣರ ರಾಜ್ಯವು ಸ್ಥಾಪನೆಯಾಗುತ್ತಿದೆ ಅಂದಮೇಲೆ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು. ಪತಿತ-ಪಾವನ ತಂದೆಯನ್ನು ನಾವು ಯಾರನ್ನು ಕರೆಯುತ್ತ...
ಸತ್ಯಯುಗದಲ್ಲಿ ಬಹಳ ಸ್ವಚ್ಛತೆಯಿರುತ್ತದೆ, ಅಲ್ಲಿ ಶರೀರ(ಶವ)ಕ್ಕೆ ಯಾವುದೇ ಬೆಲೆಯಿರುವುದಿಲ್ಲ. ವಿದ್ಯುತ್ತಿಗೆ ಕೊಟ್ಟು ಸಮಾಪ್ತಿ ಮಾಡುತ್ತಾರೆ, ಇಲ್ಲಿನ ತರಹ ಭಸ್ಮ(ಬೂದಿ)ವನ್ನು ನದಿ ಮೊದಲಾದುವುಗಳಲ್ಲಿ ಹಾಕುವುದಿಲ್ಲ ಅಥವಾ ಆ ಶರೀರವನ್ನು ಎಲ್ಲಿಯೂ ತೆಗೆದುಕೊಂಡು ಹೋಗುವುದಿಲ್ಲ, ಈ ಕಷ್ಟದ ಮಾತೇ ಇರುವುದಿಲ್ಲ. ವಿದ್ಯುತ್ತಿಗೆ ಕೊಟ್ಟು ಸಮಾಪ್ತಿ ಮಾಡಿ ಬಿಡುವರು. ಇಲ್ಲಿ ಶರೀರದ ಹಿಂದೆ ಮನುಷ್ಯರ...
ನೀವು ಮಕ್ಕಳಿಗೆ ಕಲ್ಪದ ಮೊದಲೂ ಸಹ ಈ ತ್ರಿಮೂರ್ತಿಯ ಚಿತ್ರದಲ್ಲಿ ತಿಳಿಸಿದ್ದಾರೆ ಆದ್ದರಿಂದಲೇ ಈಗಲೂ ಸಹ ಇದು ಇದೆಯಲ್ಲವೆ. ಅಂದಮೇಲೆ ಅವಶ್ಯವಾಗಿ ತಿಳಿಸಬೇಕಾಗುವುದು. ಈಗ ತಿಳಿಸುವುದಕ್ಕಾಗಿ ಎಷ್ಟೊಂದು ಚಿತ್ರಗಳು ಬಿಡುಗಡೆಯಾಗಿದೆ. ಏಣಿ ಚಿತ್ರವು ಎಷ್ಟು ಚೆನ್ನಾಗಿದೆ! ಆದರೂ ಸಹ ತಿಳಿದುಕೊಳ್ಳುವುದಿಲ್ಲ. ಅರೆ! ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈಗ ಇದು ಅಂತಿಮ ಜನ್ಮವಾಗಿದೆ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಎಂದೂ ಒಬ್ಬರು ಇನ್ನೊಬ್ಬರ ಮನಸ್ಸನ್ನು ಕೆಡಿಸಬಾರದು. ಸರ್ವೀಸ್ ಮಾಡುವ ಉಲ್ಲಾಸವನ್ನು ಇಟ್ಟುಕೊಳ್ಳಬೇಕು. ಜ್ಞಾನ ಧನವಿದ್ದರೆ ಅವಶ್ಯವಾಗಿ ದಾನ ಮಾಡಬೇಕು.
2. ಹೊಸ ಮನೆಯಲ್ಲಿ ಹೋಗುವುದಕ್ಕಾಗಿ ಸ್ವಯಂನ್ನು ಯೋಗ್ಯನನ್ನಾಗಿ ಮಾಡಿಕೊಳ್ಳಬೇಕಾಗಿದೆ. ಆತ್ಮವನ್ನು ನೆನಪಿನ ಬಲದಿಂದ ಪಾವನ ಮಾಡಿಕೊಳ್ಳಬೇಕಾಗಿದೆ.
ಓಂ ಶಾಂತಿ. ಈ ಗೀತೆಯನ್ನು ಯಾರು ಕೇಳುತ್ತಾರೆ? ಮಕ್ಕಳೇ ಕೇಳುತ್ತಾರೆ, ಅವರೇ ಅರ್ಥವನ್ನು ತಿಳಿದುಕೊಳ್ಳುತ್ತಾರೆ. ಪ್ರಜೆಗಳೂ ಸಹ ಯಾರು ಕೇಳುವರೋ ಅವರೂ ವಿಶ್ವದ ಮಾಲೀಕರಾಗುತ್ತಾರೆ. ಹೇಗೆ ಭಾರತವಾಸಿಗಳೆಲ್ಲರೂ ನಮ್ಮ ಭಾರತ ಎಂದು ಹೇಳುತ್ತಾರೆ, ಹಾಗೆಯೇ ಸತ್ಯಯುಗದಲ್ಲಿಯೂ ಸಹ ಯಥಾರಾಜ-ರಾಣಿ ತಥಾ ಪ್ರಜಾ ಇರುತ್ತಾರೆ. ನಾವು ವಿಶ್ವದ ಮಾಲೀಕರೆಂದು ಎಲ್ಲರೂ ತಿಳಿದುಕೊಳ್ಳುತ್ತಾರೆ. ಹೇಗೆ ಯುರೋಪಿಯನ್ನರ...
ತಂದೆಯು ತಿಳಿಸುತ್ತಾರೆ - ನಾನು ಸರ್ವೀಸ್ ಮಾಡಲು ಎಷ್ಟು ದೂರದ ದೇಶದಿಂದ ಬರುತ್ತೇನೆ. ನೀವೂ ಸಹ ಸರ್ವೀಸ್ ಮಾಡಬೇಕಾಗಿದೆ. ಪ್ರದರ್ಶನಿ, ಮೇಳಗಳಲ್ಲಿ ಬಹಳಷ್ಟು ತಿಳಿದುಕೊಳ್ಳಲು ಸಾಧ್ಯವಿಲ್ಲ. ಭಲೆ ರಾಜ್ಯಪಾಲ ಮೊದಲಾದವರು ಉದ್ಘಾಟನೆ ಮಾಡುತ್ತಾರೆ ಆದರೆ ಇವರಿಗೆ ಪರಮಾತ್ಮನೇ ಬ್ರಹ್ಮಾರವರ ಮೂಲಕ ಓದಿಸುತ್ತಾರೆ, ಇದರಿಂದ ವಿಶ್ವದ ಆಸ್ತಿಯು ಸಿಗುತ್ತದೆಯೆಂಬುದು ಅವರ ಬುದ್ಧಿಯಲ್ಲಿ ಬರುತ್ತದೆಯೇ? ಇದು ...
ನೀವು ಮಕ್ಕಳ ಕೆಲಸವಾಗಿದೆ - ಬ್ರಾಹ್ಮಣ ಧರ್ಮವನ್ನು ವೃದ್ಧಿ ಮಾಡುವುದು. ಇದರಿಂದ ಎಲ್ಲಾ ಮನುಷ್ಯರು ದೇವತೆಗಳಾಗಿ ಬಿಡುತ್ತಾರೆ. ಯಾರು ಇಲ್ಲಿನವರಾಗಿರುತ್ತಾರೆ ಅವರು ಅನ್ಯ ಸತ್ಸಂಗಗಳಲ್ಲಿ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಇಲ್ಲಿ ಮುಖ್ಯ ಮಾತು ಪವಿತ್ರತೆಯಾಗಿದೆ. ಇದಕ್ಕಾಗಿಯೇ ತಂದೆ ಮಕ್ಕಳ, ಸ್ತ್ರೀ-ಪುರುಷರ, ಪುರುಷರು ಸ್ತ್ರೀಯರಿಗೆ ಶತ್ರುಗಳಾಗಿ ಬಿಡುತ್ತಾರೆ. ಸರ್ಕಾರವೂ ಸಹ ಹೇಳುತ್ತದೆ- ಇವರೇ...
ನೀವು ಮಕ್ಕಳು ಇದನ್ನು ಪಕ್ಕಾ ನೆನಪಿಟ್ಟುಕೊಳ್ಳಿ - ನಾವೀಗ 84 ಜನ್ಮಗಳನ್ನು ಪೂರ್ಣ ಮಾಡಿದ್ದೇವೆ, ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಈ ಹಳೆಯ ಶರೀರವನ್ನು ಬಿಟ್ಟು ನಾವು ನಮ್ಮ ಮನೆಗೆ ಹೋಗುವೆವು. ಈ ಸ್ಥಿತಿಯು ಪಕ್ಕಾ ಆಗಿ ಬಿಟ್ಟರೆ ಮತ್ತೇನು ಬೇಕು! ಈ ಸ್ಥಿತಿಯಲ್ಲಿ ಶರೀರ ಬಿಟ್ಟರೂ ಸಹ ಬಹಳ ಶ್ರೇಷ್ಠ ಕುಲದಲ್ಲಿ ಜನ್ಮ ಪಡೆಯುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಮ್ಮ ಸಂಪಾದನೆಯನ್ನು ಜಮಾ ಮಾಡಿಕೊಳ್ಳುವುದಕ್ಕಾಗಿ ತಂದೆ ಮತ್ತು ಚಕ್ರವನ್ನು ನೆನಪು ಮಾಡುತ್ತಾ ಇರಬೇಕಾಗಿದೆ. ಮಾಯೆಯ ಚಕ್ರವ್ಯೂಹದಲ್ಲಿ ಎಂದೂ ಬರಬಾರದು. ಅತಿಯಾದ ಆಸೆಗಳನ್ನಿಟ್ಟುಕೊಳ್ಳಬಾರದು.
2. ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ತಮ್ಮ ಬ್ರಾಹ್ಮಣ ಧರ್ಮವನ್ನು ವೃದ್ಧಿ ಮಾಡಬೇಕಾಗಿದೆ. ಹಳ್ಳಿ-ಹಳ್ಳಿಗಳಿಗೆ ಹೋಗಿ ಸೇವೆ ಮಾಡಬೇಕಾಗಿದೆ.
ಸದಾ ಪ್ರಸನ್ನರಾಗಿರುವುದು ಹೇಗೆ?
ಇಂದು ಬಾಪ್ದಾದಾ ನಾಲ್ಕಾರು ಕಡೆಯ ಮಕ್ಕಳನ್ನು ನೋಡುತ್ತಿದ್ದರು, ಏನನ್ನು ನೋಡಿದರು? ಪ್ರತಿಯೊಬ್ಬ ಮಗು ಪ್ರತೀ ಸಮಯ ಸ್ವಯಂ ಎಷ್ಟು ಪ್ರಸನ್ನವಾಗಿರುತ್ತಾರೆ, ಜೊತೆ ಜೊತೆಗೆ ಅನ್ಯರನ್ನೂ ಸ್ವಯಂನ ಮೂಲಕ ಎಷ್ಟು ಪ್ರಸನ್ನಗೊಳಿಸುತ್ತಾರೆ? ಏಕೆಂದರೆ ಪರಮಾತ್ಮನ ಸರ್ವಪ್ರಾಪ್ತಿಗಳ ಪ್ರತ್ಯಕ್ಷ ಸ್ವರೂಪದಲ್ಲಿ ಪ್ರಸನ್ನತೆಯೇ ಚಹರೆಯ ಮೇಲೆ ಕಂಡು ಬರುತ್ತದೆ. “ಪ್ರಸನ್ನತೆ”ಯು ಬ್ರಾಹ್ಮಣ ಜೀವನದ ವಿಶೇಷ ಆಧಾರವ...
ಬಾಪ್ದಾದಾ ನೋಡಿದೆವು - ಕೆಲವು ಮಕ್ಕಳು ತನ್ನೊಂದಿಗೂ ಅಪ್ರಸನ್ನವಾಗಿರುತ್ತಾರೆ, ಚಿಕ್ಕಮಾತಿನ ಕಾರಣ ಅಪ್ರಸನ್ನವಾಗಿರುತ್ತಾರೆ. ಮೊಟ್ಟ ಮೊದಲ ಪಾಠವಾದ “ನಾನು ಯಾರು” ಇದನ್ನು ತಿಳಿದುಕೊಂಡಿದ್ದರೂ ಸಹ ಮರೆತು ಹೋಗುತ್ತಾರೆ. ಯಾವ ತಂದೆಯು ಆ ರೀತಿ ಮಾಡಿದ್ದಾರೆಯೋ, ಕೊಟ್ಟಿದ್ದಾರೆಯೋ ಅವರನ್ನೇ ಮರೆತು ಹೋಗುತ್ತಾರೆ. ತಂದೆಯು ಪ್ರತಿಯೊಬ್ಬ ಮಗುವನ್ನು ಪೂರ್ಣ ಆಸ್ತಿಗೆ ಅಧಿಕಾರಿಗಳನ್ನಾಗಿ ಮಾಡಿದ್ದಾರೆ....
ಟೀಚರ್ಸ್ಗೆ ಮುಂದೆ ಕುಳಿತುಕೊಳ್ಳುವ ಭಾಗ್ಯ ಸಿಕ್ಕಿದೆ ಏಕೆಂದರೆ ಮಾರ್ಗದರ್ಶಕರಾಗಿ ಬರುತ್ತಾರೆ, ಬಹಳ ಪರಿಶ್ರಮ ಪಡುತ್ತಾರೆ. ಒಬ್ಬರನ್ನು ಸುಖಧಾಮದಿಂದ ಕರೆದರೆ ಇನ್ನೊಬ್ಬರನ್ನು ವಿಶಾಲ ಭವನದಿಂದ (ಮಧುಬನದಲ್ಲಿ) ಕರೆಯುತ್ತಾರೆ. ಇದರಿಂದ ಒಳ್ಳೆಯ ವ್ಯಾಯಾಮವಾಗಿ ಬಿಡುತ್ತದೆ. ಸೇವಾಕೇಂದ್ರದಲ್ಲಂತೂ ವಾಕಿಂಗ್ ಮಾಡುವುದಿಲ್ಲ, ಯಜ್ಞದ ಆದಿಯಲ್ಲಿ ಸೇವೆಯನ್ನು ಆರಂಭ ಮಾಡಿದಾಗ ಎಲ್ಲರೂ ನಡೆದುಕೊಂಡೇ ಹೋಗು...
ಪ್ರತಿಯೊಂದು ಗ್ರೂಪ್ನಲ್ಲಿ ಶಿಕ್ಷಕಿ ಸಹೋದರಿಯರೂ ಬರುತ್ತಾರೆ, ಕುಮಾರಿಯರೂ ಬರುತ್ತಾರೆ ಆದರೆ ಯಾರೂ ಸಮರ್ಪಣೆ ಆಗುವುದಿಲ್ಲ. ಮಧುಬನವು ಇಷ್ಟವಾಗುತ್ತದೆ, ತಂದೆಯೊಂದಿಗೆ ಪ್ರೀತಿಯೂ ಇದೆ ಆದರೆ ಸಮರ್ಪಣೆಯಾಗಲು ಆಲೋಚಿಸುತ್ತಾರೆ. ಯಾರು ಸ್ವಯಂ ತಾವಾಗಿಯೇ ಮುಂದೆ ಬರುವರೋ ಅರ್ಥಾತ್ ಸಮರ್ಪಣೆಯಾಗುವರೋ ಅವರು ನಿರ್ವಿಘ್ನರಾಗಿ ನಡೆಯುತ್ತಾರೆ ಮತ್ತು ಯಾರು ಹೇಳುವುದರಿಂದ ನಡೆಯುವರೋ ಅವರು ನಿಲ್ಲುತ್ತಾರೆ ...
ಸರ್ವ ಸದಾ ಪ್ರಸನ್ನತೆಯ ವಿಶೇಷತೆಯಿಂದ ಸಂಪನ್ನ, ಶ್ರೇಷ್ಠಾತ್ಮರಿಗೆ, ಸದಾ ತಮ್ಮ ವಿಶೇಷತೆಯನ್ನು ಅರಿತುಕೊಂಡು ಕಾರ್ಯದಲ್ಲಿ ತೊಡಗಿಸುವಂತಹ ಬುದ್ಧಿವಂತ ಮತ್ತು ಉದಾಹರಣಾ ಮೂರ್ತಿ ಆತ್ಮರಿಗೆ, ಸದಾ ಪ್ರಸನ್ನರಾಗಿರುವಂತಹ ಪ್ರಸನ್ನಗೊಳಿಸುವ ಶ್ರೇಷ್ಠತೆಯನ್ನು ಹೊಂದಿರುವ ಮಹಾನ್ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಆಗ್ರಾ-ರಾಜಸ್ಥಾನ:
ಸದಾ ತಮ್ಮನ್ನು ಅಕಾಲ ಸಿಂಹಾನಧಿಕಾರಿ ಶ್ರೇಷ್ಠ ಆತ್ಮನೆಂದು ತಿಳಿಯುವಿರಾ? ಆತ್ಮನು ಅಕಾಲನಾಗಿದ್ದಾನೆ ಅಂದಮೇಲೆ ಅದರ ಸಿಂಹಾಸನವೂ ಅಕಾಲ ಸಿಂಹಾಸನವಾಯಿತಲ್ಲವೆ! ಈ ಸಿಂಹಾಸನದ ಮೇಲೆ ಆತ್ಮವು ಕುಳಿತುಕೊಂಡು ಎಷ್ಟೊಂದು ಕಾರ್ಯವನ್ನು ಮಾಡುತ್ತದೆ. ನಾನು `ಸಿಂಹಾಸನಾಧಿಕಾರಿ ಆತ್ಮನಾಗಿದ್ದೇನೆ' ಎಂಬ ಸ್ಮೃತಿಯಿಂದ ಸ್ವತಹವಾಗಿಯೇ ಸ್ವರಾಜ್ಯದ ಸ್ಮೃತಿಯು ಬರುತ್ತದೆ. ಯಾವಾಗ ರಾಜನು ಸಿಂಹಾಸನದ ಮೇಲೆ ಕುಳಿತು...
ಎಲ್ಲರೂ ಸಂತುಷ್ಟವಾಗಿ ಇದ್ದೀರಲ್ಲವೆ! ಸಂತುಷ್ಟತೆ ಅರ್ಥಾತ್ ಪ್ರಸನ್ನವಾಗಿರುವುದು. ಸದಾ ಪ್ರಸನ್ನವಾಗಿ ಇರುತ್ತೀರಾ ಅಥವಾ ಕೆಲವೊಮ್ಮೆ ಪ್ರಸನ್ನವಾಗಿರುತ್ತೀರಾ? ಕೆಲವೊಮ್ಮೆ ಅಪ್ರಸನ್ನ, ಕೆಲವೊಮ್ಮೆ ಪ್ರಸನ್ನವಾಗಿರುವಂತೆ ಇರುವುದಿಲ್ಲವೇ, ಕೆಲವೊಮ್ಮೆ ಕೆಲವು ಮಾತುಗಳಲ್ಲಿ ಅಪ್ರಸನ್ನರಂತು ಆಗುವುದಿಲ್ಲವೇ?ಇಂದು ಇದನ್ನು ಮಾಡಿದೆನು, ಇಂದು ಇದಾಯಿತು, ನೆನ್ನೆ ಅದಾಯಿತು - ಈ ರೀತಿಯಾಗಿ ಪತ್ರವನ್ನು ...
ಓಂ ಶಾಂತಿ. ಇದನ್ನು ಯಾರು ಹೇಳಿದರು? ಧೈರ್ಯವಹಿಸಿ ಅರ್ಥಾತ್ ತಾಳ್ಮೆಯಿಂದಿರಿ ಎಂದು ತಂದೆಯು ಮಕ್ಕಳಿಗೆ ಹೇಳಿದರು, ಇಡೀ ಪ್ರಪಂಚಕ್ಕೆ ಹೇಳಲಿಲ್ಲ. ಭಲೆ ಎಲ್ಲರೂ ಮಕ್ಕಳಾಗಿದ್ದಾರೆ ಆದರೆ ಎಲ್ಲರೂ ಕುಳಿತುಕೊಂಡಿಲ್ಲ ಅಲ್ಲವೆ. ಮಕ್ಕಳೇ ತಿಳಿದುಕೊಂಡಿದ್ದೀರಿ, ಅವಶ್ಯವಾಗಿ ಈ ದುಃಖಧಾಮವು ಬದಲಾಗುತ್ತಿದೆ, ಸುಖಧಾಮಕ್ಕಾಗಿ ನಾವು ಓದುತ್ತಿದ್ದೇವೆ ಮತ್ತು ಶ್ರೀಮತದಂತೆ ನಡೆಯುತ್ತಿದ್ದೇವೆ. ಮಕ್ಕಳಿಗೆ ಧೈರ...
ಈಗ ನೀವು ಮಕ್ಕಳಿಗೆ ಯೋಗದ ಚಿಂತನೆಯಿದೆ. ಜೀವಿಸಿದ್ದಂತೆಯೇ ಸಾಯಬೇಕಾಗಿದೆ. ದೇಹಾಭಿಮಾನವನ್ನು ಕಳೆಯುವುದು ಎಂದರೆ ಸಾಯುವುದು ಎಂದರ್ಥ. ನಾವಾತ್ಮರು ತಂದೆಯನ್ನು ನೆನಪು ಮಾಡಿ ಪತಿತರಿಂದ ಪಾವನರಾಗಿ ಬಿಡಬೇಕು, ಈ ಪಾವನರಾಗುವ ಯುಕ್ತಿಯನ್ನು ತಂದೆಯೇ ತಿಳಿಸಿದ್ದರು. ಈಗ ಪುನಃ ತಿಳಿಸುತ್ತಿದ್ದಾರೆ. ಕಲ್ಪ-ಕಲ್ಪವೂ ತಿಳಿಸುತ್ತಾರೆ. ಪ್ರಪಂಚದಲ್ಲಿ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಮೂಲ ಮಾತು ಶಿವ ತ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಮ್ಮ ಜೋಳಿಗೆಯನ್ನು ಜ್ಞಾನರತ್ನಗಳಿಂದ ತುಂಬಿಸಿಕೊಂಡು ದಾನ ಮಾಡಬೇಕಾಗಿದೆ. ಇದೇ ಕರ್ತವ್ಯದಲ್ಲಿ ತತ್ಫರರಾಗಿದ್ದು ಫಸ್ಟ್ಕ್ಲಾಸ್ ಬ್ರಾಹ್ಮಣರಾಗಬೇಕಾಗಿದೆ.
2. ಕಲ್ಯಾಣಕಾರಿ ತಂದೆಯ ಮಕ್ಕಳಾಗಿದ್ದೀರಿ ಆದ್ದರಿಂದ ಎಲ್ಲರ ಕಲ್ಯಾಣ ಮಾಡಬೇಕಾಗಿದೆ. ಅನ್ಯರ ಭಾವನೆಯನ್ನು ಕೆಡಿಸುವುದು, ಉಲ್ಟಾ ಮತ ಕೊಡುವುದು, ಇಂತಹ ಅಕಲ್ಯಾಣದ ಕರ್ತವ್ಯವನ್ನು ಎಂದೂ ಮಾಡಬಾರದು.
ಓಂ ಶಾಂತಿ. ಮಧುರಾತಿ ಮಧುರ ಆತ್ಮೀಯ ಮಕ್ಕಳೇ ಇದನ್ನು ತಿಳಿದುಕೊಂಡಿರುವಿರಿ ಒಂದು ಕಡೆ ಭಕ್ತಿ. ಇನ್ನೊಂದು ಕಡೆ ಜ್ಞಾನ. ಭಕ್ತಿಯಂತೂ ಅಪಾರವಾಗಿದೆ ಮತ್ತು ಕಲಿಸುವಂತಹವರು ಅನೇಕರಿದ್ದಾರೆ. ಶಾಸ್ತ್ರವನ್ನೂ ಕಲಿಸುತ್ತಾರೆ, ಮನುಷ್ಯರು ಕಲಿಯುತ್ತಾರೆ. ಇಲ್ಲಿ ಶಾಸ್ತ್ರವೂ ಇಲ್ಲಾ, ಮನುಷ್ಯರೂ ಇಲ್ಲ. ಇಲ್ಲಿ ಕಲಿಸುವಂತಹವರು ಆತ್ಮೀಯ ತಂದೆ ಒಬ್ಬರೇ ಯಾರು ಆತ್ಮಗಳಿಗೆ ತಿಳಿಸುತ್ತಾರೆ. ಆತ್ಮವೇ ಧಾರಣೆ ಮಾ...
ನೀವು ತಿಳಿದಿರುವಿರಿ ಈ ಸನ್ಯಾಸಿಗಳು ಮುಂತಾದವರಿಗೆ ಜ್ಞಾನ ಯಾವಾಗ ಸಿಗುವುದೆಂದರೆ ಯಾವಾಗ ವಿನಾಶದ ಸಮಯ ವಾಗುತ್ತದೆ ಆಗ. ಭಲೆ ಆದರೂ ನೀವು ಹೀಗೇ ನಿಮಂತ್ರಣ ಕೊಡುತ್ತಿರಿ ಆದರೆ ಈ ಜ್ಞಾನ ಅವರ ಕಳಷದಲ್ಲಿ ಬೇಗನೆ ಬರುವುದಿಲ್ಲ.ಯಾವಾಗ ವಿನಾಶ ಎದುರಲ್ಲಿ ನೋಡುತ್ತಾರೆ ಆಗ ಬರುತ್ತದೆ, ತಿಳಿಯುತ್ತಾರೆ ಈಗ ಮೃತ್ಯು ಇನ್ನೇನು ಬಂದಿತು. ಯಾವಾಗ ಸಮೀಪದಿಂದ ನೋಡುತ್ತಾರೆ ಆಗ ಒಪ್ಪುತ್ತಾರೆ. ಅವರ ಪಾತ್ರವೇ ಅ...
ನಿಮ್ಮ ವೃಕ್ಷ ನಿಧಾನವಾಗಿ ಬೆಳೆಯುತ್ತಿದೆ. ಸನ್ಯಾಸಿಗಳಿಗೆ ಹೇಳಬೇಕುಕೇವಲ ತಂದೆಯನ್ನು ನೆನಪುಮಾಡಿ ಎಂದು. ತಂದೆ ಇದನ್ನೂ ತಿಳಿಸುತ್ತಾರೆ ನೀವು ಕಣ್ಣನ್ನು ಮುಚ್ಚಿಕೊಳ್ಳಬಾರದು ಎಂದು. ಕಣ್ಣನ್ನು ಮುಚ್ಚಿಕೊಂಡರೆ ತಂದೆಯನ್ನು ಹೇಗೆ ನೋಡುವಿರಿ. ನಾನು ಆತ್ಮ ಆಗಿದ್ದೇನೆ, ಪರಮಪಿತ ಮರಮಾತ್ಮನ ಎದುರು ಕುಳಿತಿದ್ದೇನೆ. ಅವರನ್ನು ನೋಡಲಾಗುವುದಿಲ್ಲ, ಅದರೆ ಈ ಜ್ಞಾನ ಬುದ್ಧಿಯಲ್ಲಿದೆ. ನೀವು ಮಕ್ಕಳು ತಿಳ...
ಇದು ವಿಧ್ಯೆಯಾಗಿದೆ, ಕಲ್ಪ-ಕಲ್ಪ ತಂದೆ ಬಂದು ನಿಮಗೆ ಓದಿಸುತ್ತಾರೆ. ಈಗ ಸಂಗಮಯುಗವಾಗಿದೆ. ನೀವು ಟ್ರಾನ್ಸ್ಫರ್ ಆಗಬೇಕಾಗಿದೆ. ಡ್ರಾಮಾದ ಪ್ಲಾನ್ ಅನುಸಾರ ನೀವು ಪಾತ್ರವನ್ನಭಿನಯಿಸುತ್ತಿರುವಿರಿ, ಪಾತ್ರದ ಮಹಿಮೆ ಇದೆ. ತಂದೆ ಬಂದು ಡ್ರಾಮಾನುಸಾರ ಓದಿಸುತ್ತಾರೆ. ನೀವು ತಂದೆಯಿಂದ ಒಂದು ಬಾರಿ ಓದಿ ಮನುಷ್ಯರಿಂದ ದೇವತೆ ಖಂಡಿತ ಆಗಬೇಕು. ಇದರಿಂದ ಮಕ್ಕಳಿಗಂತು ಖುಶಿಯಾಗುತ್ತದೆ. ಈಗ ನಾವು ತಂದೆಯನ್ನ...
ಈಗ ನಿಮ್ಮ ಬುದ್ಧಿಯಲ್ಲಿದೆ- ನಾನು ಆತ್ಮನಾಗಿದ್ದೇನೆ. ತಂದೆಯೂ ಆತ್ಮ ಆಗಿದ್ದಾರೆ ಈ ಸಮಯದಲ್ಲಿ ನೀವು ಆತ್ಮಗಳಿಗೆ ಓದಿಸುತ್ತಿದ್ದಾರೆ ಆದ್ದರಿಂದ ಗಾಯನ ಇದೆ- ಆತ್ಮಗಳು ಮತ್ತು ಪರಮಾತ್ಮ ಬಹಳಕಾಲದಿಂದ ಅಗಲಿಹೋಗಿದ್ದರು.... ಎಂದು, ಕಲ್ಪ-ಕಲ್ಪ ಮಿಲನ ಮಾಡುತ್ತಿರುತ್ತಾರೆ. ಬಾಕಿ ಯಾವುದು ಇಡೀ ಪ್ರಪಂಚ ಇದೆ, ಅವರೆಲ್ಲ ದೇಹ-ಅಭಿಮಾನದಲ್ಲಿ ಬಂದು ದೇಹವೆಂದು ತಿಳಿದೇ ಒದುತ್ತಾರೆ ಹಾಗೂ ಓದಿಸುತ್ತಾರೆ. ತ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ: