text
stringlengths
0
61.5k
ಓಂ ಶಾಂತಿ. ಮಕ್ಕಳಿಗೆ ಯೋಗವನ್ನು ಕಲಿಸಿದೆನು. ಮತ್ತೆಲ್ಲಾ ಸೆಂಟರ್ಗಳಲ್ಲಿ ಎಲ್ಲರೂ ತಾವೇ ಕಲಿಯುತ್ತಾರೆ. ಕಲಿಸುವವರು ತಂದೆಯಾಗಿರುವುದಿಲ್ಲ. ಪರಸ್ಪರ ಒಬ್ಬರು ಇನ್ನೊಬ್ಬರಿಗೆ ತಾವೇ ಕಲಿಸುತ್ತಾರೆ. ಆದರೆ ಇಲ್ಲಿ (ಮಧುಬನ)ತಂದೆಯೇ ಕುಳಿತು ಮಕ್ಕಳಿಗೆ ಕಲಿಸಿಕೊಡುತ್ತಾರೆ. ರಾತ್ರಿ-ಹಗಲಿನ ಅಂತರವಿದೆ. ಸೇವಾಸ್ಥಾನ(ಸೆಂಟರ್)ಗಳಲ್ಲಿ ಬಹಳ ಮಿತ್ರಸಂಬಂಧಿಗಳು ನೆನಪಿಗೆ ಬರುತ್ತಿರುತ್ತಾರೆ. ಆದ್ದರಿಂದ ಇ...
ತಂದೆಯು ತಿಳಿಸಿದ್ದರು- ನಿಮಗೆ ಎಲ್ಲಿಂದಲೇ ನಿಮಂತ್ರಣ ಸಿಗಲಿ, ಅಲ್ಲಿಗೆ ಹೋಗಿ ತಿಳಿಸಿ- ವಿಶ್ವದಲ್ಲಿ ಶಾಂತಿಯು ಯಾವಾಗ ಇತ್ತು? ಈ ಅಬುಪರ್ವತವು ಎಲ್ಲದಕ್ಕಿಂತ ಶ್ರೇಷ್ಠಸ್ಥಾನವಾಗಿದೆ. ಏಕೆಂದರೆ ತಂದೆಯು ವಿಶ್ವದ ಸದ್ಗತಿ ಮಾಡುತ್ತಿದ್ದಾರೆ. ಅಬುಪರ್ವತದ ಮೇಲೆ ಅದರ ಮಾದರಿಯನ್ನು ನೋಡಬೇಕೆಂದರೆ ಹೋಗಿ ದಿಲ್ವಾಡಾ ಮಂದಿರವನ್ನು ನೋಡಿ, ವಿಶ್ವದಲ್ಲಿ ಶಾಂತಿಯನ್ನು ಹೇಗೆ ಸ್ಥಾಪನೆ ಮಾಡಲಾಗಿತ್ತು ಎಂಬುದ...
ತಂದೆಯು ತಿಳಿಸುತ್ತಾರೆ- ನಾನೂ ಸಹ ಇಲ್ಲಿಯೇ ಇದ್ದೇನೆ. ಆದಿದೇವನೂ ಇಲ್ಲಿದ್ದಾರೆ, ವೈಕುಂಠವೂ ಇಲ್ಲಿಯೇ ಇದೆ. ಮುಂದೆ ಅಬುಪರ್ವತದ ಬಹಳಷ್ಟು ಮಹಿಮೆಯಾಗಿಬಿಡುತ್ತದೆ. ಹೇಗೆ ನೋಡಿ, ಕುರುಕ್ಷೇತ್ರವನ್ನು ಚೆನ್ನಾಗಿ ಮಾಡಲು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿರುತ್ತಾರೆ. ಎಷ್ಟು ಮಂದಿ ಮನುಷ್ಯರು ಹೋಗಿ ಅಲ್ಲಿ ಸೇರುತ್ತಾರೆ. ಇಷ್ಟೊಂದು ದುರ್ಗಂಧವಾಗಿಬಿಡುತ್ತದೆ. ಅದರ ಮಾತೇ ಕೇಳಬೇಡಿ. ಎಷ್ಟ...
ಈಗ ತಂದೆಯು ತಿಳಿಸುತ್ತಾರೆ- ಈ ವಿದ್ಯೆಯು ಆದಾಯದ ಮೂಲವಾಗಿದೆ. ಸ್ವಯಂ ತಂದೆಯೇ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವುದಕ್ಕಾಗಿ ಓದಿಸಲು ಬರುತ್ತಾರೆ. ಇದರಲ್ಲಿ ಅವಶ್ಯವಾಗಿ ಪವಿತ್ರರೂ ಆಗಬೇಕು. ದೈವೀಗುಣಗಳನ್ನೂ ಧಾರಣೆ ಮಾಡಬೇಕಾಗಿದೆ. ನಂಬರ್ವಾರಂತೂ ಇದ್ದೇ ಇರುತ್ತಾರೆ. ಯಾವುದೆಲ್ಲಾ ಸೇವಾಕೇಂದ್ರಗಳಿವೆಯೋ ಎಲ್ಲಾ ಕಡೆಯೂ ನಂಬರ್ವಾರ್ ಇದ್ದಾರೆ. ಈಗ ರಾಜಧಾನಿಯು ಸ್ಥಾಪನೆಯಾಗುತ್ತದೆ. ಇದೇನೂ ಚಿಕ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ದೇಹೀ-ಅಭಿಮಾನಿಯಾಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಅದೃಷ್ಟದಲ್ಲಿದ್ದರೆ ಆಗುತ್ತದೆ ಎಂದು ಎಂದಿಗೂ ಯೋಚಿಸಬಾರದು. ಬುದ್ಧಿವಂತರಾಗಬೇಕಾಗಿದೆ.
2. ಜ್ಞಾನವನ್ನು ಕೇಳಿ ಅದನ್ನು ಸ್ವರೂಪದಲ್ಲಿ ತರಬೇಕಾಗಿದೆ. ನೆನಪಿನ ಹರಿತವನ್ನು ಧಾರಣೆ ಮಾಡಿ ನಂತರ ಸೇವೆ ಮಾಡಬೇಕಾಗಿದೆ. ಎಲ್ಲರಿಗೂ ಅಬು ಮಹಾನ್ ತೀರ್ಥಸ್ಥಾನದ ಮಹಿಮೆಯನ್ನು ತಿಳಿಸಬೇಕಾಗಿದೆ.
ಏಕವ್ರತದವರಾಗಿ ಪವಿತ್ರತೆಯ ಧಾರಣೆಯ ಮುಖಾಂತರ ಆತ್ಮೀಯತೆಯಲ್ಲಿದ್ದು ಮನಸ್ಸಾ ಸೇವೆ ಮಾಡಿರಿ
ಇಂದು ಆತ್ಮೀಯ ತಂದೆ ನಾಲ್ಕಾರು ಕಡೆಯ ಆತ್ಮೀಯ ಮಕ್ಕಳ ಆತ್ಮೀಯತೆಯನ್ನು ನೋಡುತ್ತಿದ್ದರು. ಪ್ರತಿಯೊಬ್ಬ ಮಕ್ಕಳಲ್ಲಿ ಆತ್ಮೀಯತೆಯ ಹೊಳಪು ಎಷ್ಟಿದೆ? ಆತ್ಮೀಯತೆ ನಯನಗಳಿಂದ ಪ್ರತ್ಯಕ್ಷವಾಗುತ್ತದೆ. ಆತ್ಮೀಯತೆಯ ಶಕ್ತಿಯಿರುವ ಆತ್ಮ ಸದಾ ನಯನಗಳಿಂದ ಅನ್ಯರಿಗೂ ಸಹ ಆತ್ಮೀಯತೆಯ ಶಕ್ತಿಯನ್ನು ನೀಡುತ್ತಾರೆ. ಆತ್ಮೀಯತೆಯ ಮುಗುಳ್ಳಗೆ ಅನ್ಯರಿಗೂ ಸಹ ಖುಷಿಯ ಅನುಭವವನ್ನು ಮಾಡಿಸುತ್ತದೆ. ಅವರ ಚಲನೆ, ಮುಖಪುಟವ...
ಆದ್ದರಿಂದ ತನ್ನನ್ನು ತಾವೇ ನೋಡಿಕೊಳ್ಳಿರಿ, ಚೆಕ್ ಮಾಡಿಕೊಳ್ಳಿ-ನನ್ನ ಸಂಕಲ್ಪ, ಮಾತಿನಲ್ಲಿ ಎಷ್ಟು ಆತ್ಮೀಯತೆಯಿದೆ? ಆತ್ಮೀಯತೆಯ ಸಂಕಲ್ಪ ತನ್ನಲ್ಲಿಯೂ ಶಕ್ತಿ ತುಂಬುವಂತಹದ್ದಾಗಿದೆ ಮತ್ತು ಅನ್ಯರಿಗೂ ಶಕ್ತಿಯನ್ನು ನೀಡುತ್ತದೆ. ಇದನ್ನೇ ಬೇರೆ ಶಬ್ದಗಳಲ್ಲಿ ಹೇಳಲಾಗುತ್ತದೆ - ಆತ್ಮೀಯತೆಯ ಸಂಕಲ್ಪ ಮನಸ್ಸಾ ಸೇವೆಗೆ ನಿಮಿತ್ತವಾಗುತ್ತದೆ. ಆತ್ಮೀಯ ಮಾತು ಸ್ವಯಂಗೆ ಮತ್ತು ಅನ್ಯರಿಗೆ ಸುಖದ ಅನುಭವವನ್...
ಬಾಪ್ದಾದಾ ಪ್ರತಿ ಮಕ್ಕಳ ಪವಿತ್ರತೆಯ ಆಧಾರದ ಮೇಲೆ ಆತ್ಮೀಯತೆಯನ್ನು ನೋಡಲು ಬಯಸುತ್ತಾರೆ. ಬಾಪ್ದಾದಾರವರ ಬಳಿ ಎಲ್ಲರ ಚಾಟರ್ಂತೂ ಇದೆ. ತಿಳಿಸುವುದಿಲ್ಲ. ಆದರೆ ಚಾರ್ಟ್ ಇದೆ, ಏನೇನು ಮಾಡುತ್ತೀರಾ? ಹೇಗೆ ಮಾಡುತ್ತೀರಾ, ಎಲ್ಲರದು ಚಾರ್ಟ್ ಬಾಪ್ದಾದಾರವರ ಬಳಿ ಇದೆ. ಪವಿತ್ರತೆಯಲ್ಲಿ ಈಗಲೂ ಕೆಲವು-ಕೆಲವು ಮಕ್ಕಳಲ್ಲಿ ತುಂಬಾ ಕಡಿಮೆ % ಇದೆ. ಸಮಯದ ಅನುಸಾರ ವಿಶ್ವದ ಆತ್ಮಗಳು ನೀವು ಆತ್ಮಗಳ ಆತ್ಮೀಯತೆ...
ಇಲ್ಲಿ ಮಧುಬನದಲ್ಲಿ ಎಲ್ಲರೂ ಮುಂದೆ, ಮುಂದುವರೆಯುತ್ತಾರೆ, ಒಳ್ಳೆಯದು. ಸೇವೆಯನ್ನು ಚೆನ್ನಾಗಿ ಮಾಡುತ್ತೀರಿ. ಮಧುಬನದವರು ಎವರ್ರೆಡಿ ಆಗಿದ್ದೀರಾ? ಮುಗುಳ್ನಗುತ್ತಿದ್ದರು, ಭಲೇ ಮೊದಲನೆಯ ಸಾಲಿನಲ್ಲಿ ಕುಳಿತಿರುವ ಮಹಾರಥಿಗಳೇ ಎವರ್ರೆಡಿ ಆಗಿದ್ದೀರಾ? ತಂದೆಯ ಸಮಾನವಾಗುವುದರಲ್ಲಿ ಎವರ್ರೆಡಿ ಆಗಿದ್ದೀರಾ? ಈ ರೀತಿ ತಿಳಿದರೆ ಅಡ್ವಾನ್ಸ್ ಪಾರ್ಟಿಯಲ್ಲಿ ಹೋಗುತ್ತೀರಿ. ಅಡ್ವಾನ್ಸ್ ಪಾರ್ಟಿ ಬಯಸದ್ದಿದ್...
ಹೇ! ಮಾತೆಯರೇ ಆಗುತ್ತದೆಯೇ? ಪಾಂಡವರೇ ಆಗುತ್ತದೆಯೇ? ಬಾಪ್ದಾದಾ ನಕ್ಷೆಯನ್ನು ನೋಡುತ್ತಾರೆ. ಬಾಪ್ದಾದಾರವರ ಬಳಿ ತುಂಬಾ ದೊಡ್ಡದಾದ ಟಿ.ವಿ ಇದೆ. ಪ್ರತಿಯೊಬ್ಬರನ್ನು ನೋಡಬಹುದಾಗಿದೆ. ಯಾವುದೇ ಸಮಯದಲ್ಲಿ ಯಾರೇ ಆದರೂ ಏನೇ ಮಾಡುತ್ತಿದ್ದರೂ ಬಾಪ್ದಾದಾ ನೋಡುತ್ತಾರೆ. ಆದರೆ ಏನೇನು ಮಾಡುತ್ತೀರಿ ಅದನ್ನೂ ಸಹ ನೋಡುತ್ತಾರೆ. ಮಕ್ಕಳೂ ಸಹ ಬಹಳ ಬುದ್ಧಿವಂತಿಕೆಯನ್ನು ತೋರಿಸುತ್ತಾರೆ. ಒಂದುವೇಳೆ ನಿಮ್ಮ ಚಲ...
ಕರ್ನಾಟಕದ ಸೇವಾಧಾರಿಯೊಂದಿಗೆ: ಕರ್ನಾಟಕದವರು ಯಾರು ಸೇವೆಯಲ್ಲಿ ಬಂದಿದ್ದೀರಿ ಎದ್ದು ನಿಲ್ಲಿರಿ. ಇಷ್ಟೊಂದು ಜನರು ಸೇವೆಯಲ್ಲಿ ಬಂದಿದ್ದೀರಾ, ಪಾರ್ಟಿಯಲ್ಲಿ ಬಂದಿರುವವರಲ್ಲ, ಸೇವಾಧಾರಿಯಾಗಿ ಬಂದಿರುವವರು. ಒಳ್ಳೆಯದು, ಇದೂ ಸಹ ಸಹಜವಾಗಿ ಶ್ರೇಷ್ಠ ಪುಣ್ಯವನ್ನು ಜಮಾ ಮಾಡಿಕೊಳ್ಳುವ ಸುವರ್ಣವಕಾಶ ಸಿಕ್ಕಿದೆ. ಭಕ್ತಿಯಲ್ಲಿ ಹೇಳಲಾಗುತ್ತದೆ, ಒಬ್ಬ ಬ್ರಾಹ್ಮಣರ ಸೇವೆಯನ್ನು ಮಾಡುವುದರಿಂದ ಬಹಳ ಪುಣ್ಯ ...
ಒಳ್ಳೆಯದು ಎಲ್ಲಾ ಶಿಕ್ಷಕಿಯರು ಚೆನ್ನಾಗಿದ್ದೀರಾ? ಶಿಕ್ಷಕಿಯರಿಗಂತೂ ಅನೇಕ ಬಾರಿ ತಂದೆಯ ಮಿಲನದ ಅವಕಾಶ ಸಿಗುತ್ತದೆ. ಇದೂ ಸಹ ಭಾಗ್ಯದ ಗುರುತಾಗಿದೆ. ಈಗ ಶಿಕ್ಷಕಿಯರು ಮನಸ್ಸಾ ಸೇವೆಯಲ್ಲಿ ರೇಸ್ ಮಾಡಬೇಕಾಗಿದೆ. ಮನಸ್ಸಾ ಸೇವೆ ಮಾಡುತ್ತಿದ್ದೇನೆಂದು ಇಡೀ ದಿವಸ ಅದರಲ್ಲೇ ಕುಳಿತುಬಿಡುವುದಿಲ್ಲ. ಯಾರಾದರು ಕೋರ್ಸ್ಗೆ ಬಂದಾಗ ನಾನು ಮನಸ್ಸಾ ಸೇವೆ ಮಾಡುತ್ತಿದ್ದೇನೆಂದು ಕಳುಹಿಸಿಬೇಡಿರಿ. ಏನಾದರೂ ಕರ್...
ಈಗ ಒಂದು ಸೆಕೆಂಡಿನಲ್ಲಿ ಎಲ್ಲರೂ ಮನಸ್ಸಾ ಸೇವೆಯ ಅನುಭವವನ್ನು ಮಾಡಿ. ಆತ್ಮಗಳಿಗೆ ಶಾಂತಿ ಮತ್ತು ಶಕ್ತಿಯ ದಾನವನ್ನು ನೀಡಿ. ಒಳ್ಳೆಯದು ನಾಲ್ಕೂ ಕಡೆಯ ಸರ್ವ ಶ್ರೇಷ್ಠ ಆತ್ಮೀಯತೆಯ ಅನುಭವ ಮಾಡಿಸುವಂತಹ ಆತ್ಮಗಳಿಗೆ, ಸರ್ವ ಸಂಕಲ್ಪ ಮತ್ತು ಸ್ನೇಹದಲ್ಲಿಯೂ ಸಹ ಪವಿತ್ರತೆಯ ಪಾಠವನ್ನು ಕಲಿಯುವಂತಹ ಬ್ರಹ್ಮಾಚಾರಿ ಮಕ್ಕಳಿಗೆ, ಎಲ್ಲಾ ದೃಢ ಸಂಕಲ್ಪಧಾರಿ, ಮನಸ್ಸಾ ಸೇವಾಧಾರಿ, ತೀವ್ರ ಪುರುಷಾರ್ಥಿ ಆತ್ಮಗ...
ದಾದೀಜಿ, ಜಾನಕಿ ದಾದೀಜಿಯವರೊಂದಿಗೆ ವ್ಯಕ್ತಿಗತ ಮಿಲನ:- ಬಾಪ್ದಾದಾ ತ್ರಿಮೂರ್ತಿ ಬ್ರಹ್ಮನ ದೃಶ್ಯವನ್ನು ತೋರಿಸಿದರು. ನೀವೆಲ್ಲರೂ ನೋಡಿದಿರಲ್ಲವೇ? ಏಕೆಂದರೆ ತಂದೆ ಸಮಾನ ತಂದೆಯ ಪ್ರತಿ ಕಾರ್ಯದಲ್ಲಿ ಜೊತೆಗಾರರಲ್ಲವೇ! ಆದುದರಿಂದ ಈ ದೃಶ್ಯವನ್ನು ತೋರಿಸಲಾಯಿತು. ಬಾಪ್ದಾದಾ ನೀವಿಬ್ಬರಿಗೂ ವಿಶೇಷ ಶಕ್ತಿಗಳನ್ನು ವಿಲ್ ಮಾಡಿದ್ದಾರೆ. ವಿಲ್ ಪವರ್ನ್ನೂ ಸಹ ಕೊಟ್ಟಿದ್ದಾರೆ ಹಾಗೂ ಎಲ್ಲಾ ಶಕ್ತಿಗಳನ್ನು...
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ತಂದೆಯು ತಿಳಿಸುತ್ತಿದ್ದಾರೆ, ಓದಿಸುತ್ತಲೂ ಇದ್ದಾರೆ. ಏನು ತಿಳಿಸುತ್ತಿದ್ದಾರೆ? ಮಧುರ ಮಕ್ಕಳೇ ನಿಮಗೆ ಮೊದಲನೆಯದಾಗಿ ಧೀರ್ಘಾಯಷ್ಯ ಬೇಕು ಏಕೆಂದರೆ ನಿಮ ಅಯುಷ್ಯ ಬಹಳ ದೀರ್ಘವಾಗಿತ್ತು, 150 ವರ್ಷ ಅಯಷ್ಯವಿತ್ತು, ದೀರ್ಘಾಯಸ್ಸು ಹೇಗೆ ಸಿಗುತ್ತದೆ? ತಮೊಪ್ರಧಾನದಿಂದ ಸತೋಪ್ರಧಾನರಾಗುವುದರಿಂದ, ಯಾವಗ ನೀವು ಸತೋಪ್ರಧಾನರಾಗಿದ್ದಿರೋ ಆಗ ನಿಮ್ಮದು ...
ಈಗ ಇದು ಪುರುಷೋತ್ತಮ ಸಂಗಮ ಯುಗವಾಗಿದೆ, ಇದರ ಬಗ್ಗೆ ಯಾರಿಗೂ ತಿಳಿದಿಲ್ಲ. ಈಗ ನೀವು ಪುರುಷೋತ್ತಮರಾಗಲು ಪುರುಷಾರ್ಥ ಮಾಡುತ್ತಿರುವಿರಿ. ಹೇಗೆ ಶಿಕ್ಷಕರು ವಿದ್ಯಾರ್ಥಿಯ ಸೇವಕರಾಗಿರುತ್ತಾರಲ್ಲವೆ, ವಿದ್ಯಾರ್ಥಿಗಳ ಸೇವೆ ಮಾಡುತ್ತಾರೆ. ಸರ್ಕಾರಿ ಸೇವಕರಾಗಿದ್ದಾರೆ, ಹಾಗೆಯೇ ತಂದೆಯೂ ಹೇಳುತ್ತಾರೆ - ನಾನು ನಿಮ್ಮ ಸೇವೆ ಮಾಡುತ್ತೇವೆ, ಓದಿಸುತ್ತೇನೆ ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ, ಶಿಕ್ಷರೂ ಆಗ...
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಮಹಾನ ಆತ್ಮರಾಗುವುದಕ್ಕಾಗಿ ಯಾವ ಯಾವ ಅಪವಿತ್ರ ಕೆಟ್ಟ ಚಟಗಳಿವೆ ಅವುಗಳನ್ನು ಅಳಿಸಿಹಾಕಬೇಕು. ದುಃಖ ಕೊಡುವುದು, ಹೊಡೆಯುವುದು, ಜಗಳಾಡುವುದು. . . ಇದೆಲ್ಲವೂ ಅಪವಿತ್ರ ಕರ್ತವ್ಯವಾಗಿವೆ, ಯಾವುದನ್ನು ನೀವು ಮಾಡಬಾರದು. ನಿಮಗೆ ನೀವು ರಾಜ ತಿಲಕವನ್ನು ಕೊಟ್ಟುಕೊಳ್ಳಲು ಅಧಿಕಾರಿಗಳನ್ನಾಗಿ ಮಾಡಿಕೊಳ್ಳಬೆಕು.
2. ಬುದ್ಧಿಯನ್ನು ಎಲ್ಲ ಉದ್ಯೋಗ ವ್ಯವಹಾರಗಳ ಜಂಜಾಟದಿಂದ, ದೇಹಧಾರಿಗಳಿಂದತೆಗೆದು ಸುಗಂಧಭರಿತ ಹೂಗಳಾಗಬೇಕು. ಗುಪ್ತ ಸಂಪಾದನೆ ಜಮಾ ಮಾಡಿಕೊಳ್ಳಲು ನಡೆಯುತ್ತಾ ತಿರುಗಾಡುತ್ತಾ ಅಶರೀರಿಯಾಗಿರುವ ಅಭ್ಯಾಸ ಮಾಡಬೇಕು.
ಓಂ ಶಾಂತಿ. ವಾಸ್ತವದಲ್ಲಿ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯ ಗುಡ್ಮಾರ್ನಿಂಗ್ ಎಂದು ಹೇಳಬೇಕು ಏಕೆಂದರೆ ಮಕ್ಕಳಿಗೆ ಗೊತ್ತಿದೆ, ತಂದೆಯು ಬರುವುದೇ ರಾತ್ರಿಯನ್ನು ದಿನವನ್ನಾಗಿ ಮಾಡಲು. ಇದನ್ನೂ ಲೆಕ್ಕ ಮಾಡಲಾಗುತ್ತದೆ. ಕೊನೆಗೂ ತಂದೆಯು ಯಾವ ಸಮಯದಲ್ಲಿ ಬರುತ್ತಾರೆ? ಯಾವುದೇ ತಿಥಿ-ತಾರೀಖು ಇಲ್ಲ ಆದರೆ ಯಾವುದೋ ಸಮಯದಲ್ಲಿ ಬರುತ್ತಾರೆ, ಅವಶ್ಯವಾಗಿ 12 ಗಂಟೆಯಾದ ಒಂದು ನಿಮಿಷವಾಗಿರಬಹುದು ಆಗ ತ...
ಡ್ರಾಮಾನುಸಾರ ಸಮಯವು ಬಂದಾಗಲೇ ನಾನು ನೀವು ಮಕ್ಕಳನ್ನು ಪಾವನ ಮಾಡಲು ಬರುತ್ತೇನೆ. ಇದು ಅದೇ ಮಹಾಭಾರತ ಯುದ್ಧವಾಗಿದೆ. ಮೃತ್ಯುಲೋಕದಲ್ಲಿ ಇದು ಅಂತಿಮ ಯುದ್ಧವಾಗಿದೆ, ಅಮರಲೋಕದಲ್ಲಿ ಯುದ್ಧವಿರುವುದಿಲ್ಲ ಅಲ್ಲಿ ರಾಮ ರಾಜ್ಯವಿರುತ್ತದೆ. ಧರ್ಮಾತ್ಮರಿರುತ್ತಾರೆ, ಇಲ್ಲಿ ಪಾಪಾತ್ಮರಿದ್ದಾರೆ, ಪಾಪ ಮಾಡುತ್ತಾ ಇರುತ್ತಾರೆ. ಪುಣ್ಯಾತ್ಮರ ಪ್ರಪಂಚಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ನಾನು ಒಂದು ಸೆಕೆಂ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಏರುವ ಕಲೆಯಲ್ಲಿ ಹೋಗುವುದಕ್ಕಾಗಿ ಏಳುತ್ತಾ-ಕುಳಿತುಕೊಳ್ಳುತ್ತಾ ಒಬ್ಬ ತಂದೆಯ ನೆನಪಿನಲ್ಲಿ ಇರಬೇಕಾಗಿದೆ. ತಂದೆಯ ಸಮಾನ ಎಲ್ಲರಿಗೆ ಉಪಕಾರ ಮಾಡಬೇಕಾಗಿದೆ.
2. ಜ್ಞಾನಾಮೃತವನ್ನು ಸೇವಿಸಬೇಕು ಹಾಗೂ ಕೊಡಬೇಕಾಗಿದೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.
ಓಂ ಶಾಂತಿ. ವಾಸ್ತವದಲ್ಲಿ ಈ ಗೀತೆಯು ತಪ್ಪಾಗಿದೆ. ಈ ಪ್ರಪಂಚದಲ್ಲಿ ನೀವು ಏನೆಲ್ಲವನ್ನು ಕೇಳುತ್ತೀರೋ ಅದೆಲ್ಲವೂ ಅಸತ್ಯವಾಗಿದೆ. ತಂದೆಯು ತಿಳಿಸುತ್ತಾರೆ - ಹೇ ಭಾರತವಾಸಿ ಮಕ್ಕಳೇ ಎಂದು ಯಾರು ಸನ್ಮುಖದಲ್ಲಿದ್ದಾರೆಯೋ ಅವರಿಗೇ ಹೇಳುತ್ತಾರೆ. ಈಗ ನಿಮಗೆ ಅರ್ಥವಾಗಿದೆ, ಅದು ಭಕ್ತಿಮಾರ್ಗವಾಗಿದೆ. ವೇದ-ಶಾಸ್ತ್ರ, ಉಪನಿಷತ್ತು ಇತ್ಯಾದಿಗಳನ್ನು ಭಕ್ತಿಮಾರ್ಗದಲ್ಲಿ ಜನ್ಮ-ಜನ್ಮಾಂತರದಿಂದಲೂ ಬಹಳ ಓದುತ...
ತಮ್ಮ ಉನ್ನತಿ ಮಾಡಿಕೊಂಡು ಜೀವನವನ್ನು ರೂಪಿಸಿಕೊಳ್ಳಿರಿ. ನಾನು ಎಷ್ಟು ಸರ್ವೀಸ್ ಮಾಡಿದೆನು, ಎಷ್ಟು ಜನರನ್ನು ತನ್ನ ಸಮಾನರನ್ನಾಗಿ ಮಾಡಿದೆನು ಎಂದು ಚಿಂತೆಯಿರಬೇಕು. ತಮ್ಮ ಸಮಾನ ಯಾರನ್ನೂ ತಯಾರು ಮಾಡದಿದ್ದರೆ ಶ್ರೇಷ್ಠ ಪದವಿಯೆಂದು ಹೇಗೆ ಹೇಳುವಿರಿ? ಅಂತಹವರು ಪ್ರಜೆಗಳಲ್ಲಿ ಹೋಗುತ್ತಾರೆ ಅಥವಾ ದಾಸ-ದಾಸಿಯಾಗುತ್ತಾರೆಂದು ತಿಳಿಯಲಾಗುತ್ತದೆ. ಬಹಳಷ್ಟು ಸೇವೆಯಿದೆ, ಈಗಿನ್ನೂ ನಿಮ್ಮದು ಚಿಕ್ಕ ವೃ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸ್ವಯಂನ್ನು ಸೇವೆಗೆ ಯೋಗ್ಯನನ್ನಾಗಿ ಮಾಡಿಕೊಳ್ಳಬೇಕಾಗಿದೆ. ಯಾರು ಚೆನ್ನಾಗಿ ಸರ್ವೀಸ್ ಮಾಡುತ್ತಾರೆಯೋ ಅವರಿಗೆ ಸಂಪೂರ್ಣ ಗೌರವ ಕೊಡಬೇಕಾಗಿದೆ. ತಮ್ಮ ಉನ್ನತಿಯ ಚಿಂತನೆ ಮಾಡಬೇಕಾಗಿದೆ.
2. ತನು-ಮನ-ಧನದಿಂದ ಪೂರ್ಣ ಸೇವೆ ಮಾಡಬೇಕಾಗಿದೆ. ಶ್ರೀಮತದಂತೆ ನಡೆಯಬೇಕು, ತಪ್ಪು (ಹುಡುಗಾಟಿಕೆ) ಮಾಡಬಾರದು.
ಓಂ ಶಾಂತಿ. ಮಕ್ಕಳು ಯಾರ ಮಹಿಮೆಯನ್ನು ಕೇಳಿದಿರಿ? ಬ್ರಹ್ಮನದೋ ಅಥವಾ ಸರಸ್ವತಿಯದೋ ಅಥವಾ ಶಿವನದೋ? ಯಾವಾಗ ನಿಮ್ಮನ್ನು ಬಿಟ್ಟು ಮತ್ತ್ಯಾರೂ ಇಲ್ಲವೆಂದು ಹೇಳುತ್ತಾರೆ ಅಂದಮೇಲೆ ಮತ್ತೆ ಅನ್ಯ ಯಾರ ಮಹಿಮೆಯನ್ನು ಮಾಡಲಾಗುತ್ತದೆ? ಭಲೆ ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದಾರೆ ಆದರೆ ಅವರಿಗೂ ಮೇಲೆ ಶಿವ ತಂದೆಯಿದ್ದಾರಲ್ಲವೆ. ಅವರ ವಿನಃ ಮತ್ತ್ಯಾರಿಗೂ ಮಹಿಮೆಯಿಲ್ಲ. ಈಗಂತೂ ಅನೇಕರಿಗೆ ಶಾಂತಿಯ ಪಾರಿತೋ...
ನೀವು ಭಾರತವಾಸಿಗಳು ಏನಾಗಿ ಬಿಟ್ಟಿದ್ದೀರಿ ಎಂಬುದನ್ನು ತಂದೆಯು ಕುಳಿತು ತಿಳಿಸುತ್ತಾರೆ. ಈ ಬ್ರಹ್ಮನೂ ಸಹ ತಿಳಿದುಕೊಳ್ಳುತ್ತಾರೆ - ನಾನು ಹೇಗಿದ್ದೆನು ಮತ್ತೆ 84 ಜನ್ಮಗಳ ನಂತರ ಏನಾಗುತ್ತೇನೆ? ಭಾರತದಲ್ಲಿ ಲಕ್ಷ್ಮೀ-ನಾರಾಯಣರದೆ 84 ಜನ್ಮಗಳೆಂದು ಎಣಿಕೆ ಮಾಡಲಾಗುತ್ತದೆ. ತಂದೆಯೂ ಸಹ ಇಲ್ಲಿಯೇ ಬಂದಿದ್ದಾರೆ. ಶಿವ ಜಯಂತಿಯೂ ಸಹ ಇಲ್ಲಿಯೇ ಆಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಪತಿತ ಶರೀರ...
ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ಏನು ತಿಳಿದುಕೊಂಡಿರಿ, ಹೇ ಪತಿತ-ಪಾವನ ಬಂದು ಪಾವನ ಮಾಡಿ ಎಂದು ಹೇಳುತ್ತೀರಿ ಅಂದಮೇಲೆ ನನ್ನದು ಇದೇ ಕೆಲಸವೇನು!! ಹೀಗೆ ತಂದೆಯು ಕೆಲವೊಮ್ಮೆ ಮಕ್ಕಳೊಂದಿಗೆ ಹಾಸ್ಯ ಮಾಡುತ್ತಾರೆ. ಬಾಬಾ, ನಾವು ಪತಿತರಾಗಿ ಬಿಟ್ಟಿದ್ದೇವೆ ಬಂದು ಪಾವನ ಮಾಡಿ ಎಂದು ನೀವು ಕರೆಯುತ್ತೀರಿ. ತಂದೆಯು ಪರದೇಶದಲ್ಲಿ ಬರುತ್ತಾರೆ. ಇದು ಪತಿತ ಪ್ರಪಂಚ ಅಲ್ಲವೆ. ನಾನು ಇವರಲ್ಲಿ ಪ್...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಶಿವ ತಂದೆಯನ್ನು ನೆನಪು ಮಾಡಬೇಕು, ಬ್ರಹ್ಮಾ ತಂದೆಯನ್ನು ಫಾಲೋ ಮಾಡಬೇಕಾಗಿದೆ. ಬ್ರಹ್ಮಾ ತಂದೆಯ ಸಮಾನ ಶ್ರೇಷ್ಠ ಪುರುಷಾರ್ಥ ಮಾಡಬೇಕಾಗಿದೆ. ಈಶ್ವರೀಯ ನಶೆಯಲ್ಲಿ ಇರಬೇಕಾಗಿದೆ.
2. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ ಮತ್ತ್ಯಾವುದೇ ಮಾತಿನ ಚಿಂತೆ ಮಾಡಬಾರದು. ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ ನಡೆಯಬೇಕಾಗಿದೆ.
ಓಂ ಶಾಂತಿ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ಹೇಗೆ 5000 ವರ್ಷಗಳ ಮೊದಲು ತಿಳಿಸಿದ್ದರೋ ಹಾಗೆಯೇ ಹಳೆಯ ಪ್ರಪಂಚದ ವಿನಾಶ ಮತ್ತು ಹೊಸ ಪ್ರಪಂಚ ಸತ್ಯಯುಗದ ಸ್ಥಾಪನೆ ಹೇಗಾಗುತ್ತದೆ ಎಂಬುದನ್ನು ಚಾಚೂ ತಪ್ಪದೆ ತಿಳಿಸುತ್ತಿದ್ದಾರೆ. ಈಗ ಹಳೆಯ ಪ್ರಪಂಚ ಮತ್ತು ಹೊಸ ಪ್ರಪಂಚದ ಸಂಗಮಯುಗವಾಗಿದೆ. ತಂದೆಯು ತಿಳಿಸಿದ್ದಾರೆ - ಹೊಸ ಪ್ರಪಂಚ ಸತ್ಯಯುಗದಿಂದ ಹಿಡಿದು ಈಗ ಕಲಿಯುಗದ ಅಂತ್ಯದವರೆಗೆ ಏನೇ...
ಈಗ ನೀವು ಮಕ್ಕಳು ಎಷ್ಟು ಬುದ್ಧಿವಂತರಾಗುತ್ತೀರಿ, ತಿಳಿದುಕೊಂಡಿದ್ದೀರಿ - ನಮಗೆ ಆತ್ಮಿಕ ತಂದೆಯು ಓದಿಸುತ್ತಾರೆ. ತಂದೆಯು ವಿಶ್ವದ ಆಲ್ಮೈಟಿ ಅಥಾರಿಟಿಯಾಗಿದ್ದಾರೆ. ಆ ಮನುಷ್ಯರು ಶಾಸ್ತ್ರಗಳ ಅಥಾರಿಟಿಯಾಗಿದ್ದಾರೆ. ಆ ಶಾಸ್ತ್ರಗಳನ್ನು ಓದುವವರಿಗೆ ಆಲ್ಮೈಟಿ ಎಂದು ಹೇಳಲಾಗುವುದಿಲ್ಲ. ಇವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ. ಬಾಕಿ ಈ ವಿದ್ಯೆಯನ್ನು ತಂದೆಯು ನಿಮಗೆ ಓದಿಸುತ್ತಿದ್ದಾರೆ, ಇವು ...
ಈ ಸಮಯದಲ್ಲಿ ನಿಮ್ಮ ಗತಿಮತವು ಪ್ರಪಂಚಕ್ಕಿಂತ ಬಹಳ ಭಿನ್ನವಾಗಿದೆ. ಹೇಗೆ ಈಶ್ವರನ ಗತಿಮತವು ಭಿನ್ನವಾಗಿದೆ ಎಂದು ಹೇಳುತ್ತಾರೆ. ನಿಮ್ಮ ವಿನಃ ಯಾರೂ ತಂದೆಯೊಂದಿಗೆ ಯೋಗವನ್ನು ಇಡುವುದಿಲ್ಲ. ಪ್ರದರ್ಶನಿಯಲ್ಲಿ ಬರುತ್ತಾರೆ, ಹೊರಟು ಹೋಗುತ್ತಾರೆ. ಅಂತಹವರು ಪ್ರಜೆಗಳಾಗುತ್ತಾರೆ ಆದರೆ ಯಾರು ಚೆನ್ನಾಗಿ ಓದಿ-ಓದಿಸುವರೋ ಅವರು ಒಳ್ಳೆಯ ಪದವಿಯನ್ನು ಪಡೆಯುತ್ತಾರೆ ಮತ್ತೆ ನಿಮ್ಮ ಈ ಮೆಷಿನರಿಯು ಪ್ರಭಾವಶಾ...
ನೀವು ತಿಳಿದುಕೊಂಡಿದ್ದೀರಿ - ಯಾವ ಬಾಂಬು ಇತ್ಯಾದಿಗಳ ಯುದ್ಧವಾಗುವುದೋ ಇದರಿಂದ ಯಾವ ಗತಿಯಾಗಬಹುದು! ದಿನ-ಪ್ರತಿದಿನ ದುಃಖವು ಹೆಚ್ಚುತ್ತಾ ಹೋಗುವುದು. ಕೊನೆಗೆ ಈ ದುಃಖದ ಪ್ರಪಂಚವೇ ಸಮಾಪ್ತಿಯಾಗುತ್ತದೆ. ಸಂಪೂರ್ಣ ವಿನಾಶವಾಗುವುದಿಲ್ಲ, ಶಾಸ್ತ್ರಗಳಲ್ಲಿ ಗಾಯನವಿದೆ, ಈ ಭಾರತವು ಅವಿನಾಶಿ ಖಂಡವಾಗಿದೆ. ನೀವು ತಿಳಿದುಕೊಂಡಿದ್ದೀರಿ, ನಮ್ಮ ಸ್ಪಷ್ಟ ನೆನಪಾರ್ಥವು ಅಬುನಲ್ಲಿದೆ. ಅದರ ಬಗ್ಗೆ ತಿಳಿಸಬೇ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಹಳೆಯ ಪ್ರಪಂಚದ ವಿನಾಶವಾಗುವ ಮೊದಲು ತಮ್ಮ ಕರ್ಮಾತೀತ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ, ನೆನಪಿನಲ್ಲಿದ್ದು ಸತೋಪ್ರಧಾನರಾಗಬೇಕಾಗಿದೆ.
2. ಸದಾ ಇದೇ ಖುಷಿಯಿರಲಿ - ನಮಗೆ ಓದಿಸುವವರು ಸ್ವಯಂ ಸರ್ವಶ್ರೇಷ್ಠ ತಂದೆಯಾಗಿದ್ದಾರೆ. ವಿದ್ಯೆಯನ್ನು ಚೆನ್ನಾಗಿ ಓದಬೇಕು ಮತ್ತು ಓದಿಸಬೇಕಾಗಿದೆ. ಕೇಳಿರುವುದನ್ನು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ.
ದಿವ್ಯ ಬ್ರಾಹ್ಮಣ ಜನ್ಮದ ಭಾಗ್ಯದ ರೇಖೆಗಳು
ಇಂದು ವಿಶ್ವದ ರಚಯಿತ ಬಾಪ್ದಾದಾ ತನ್ನ ವಿಶ್ವದ ಸರ್ವ ಮನುಷ್ಯಾತ್ಮ ರೂಪಿ ಮಕ್ಕಳನ್ನು ನೋಡುತ್ತಿದ್ದಾರೆ. ಸರ್ವ ಆತ್ಮರಲ್ಲಿ ಅರ್ಥಾತ್ ಸರ್ವ ಮಕ್ಕಳಲ್ಲಿಯೂ ಎರಡು ಪ್ರಕಾರದ ಮಕ್ಕಳಿದ್ದಾರೆ. ಒಬ್ಬರು ತಂದೆಯನ್ನು ಗುರುತಿಸುವವರಾಗಿದ್ದಾರೆ, ಮತ್ತೊಬ್ಬರು ಕೂಗುವವರು ಅಥವಾ ಗುರುತಿಸುವ ಪ್ರಯತ್ನ ಪಡುವವರಾಗಿದ್ದಾರೆ ಆದರೆ ಎಲ್ಲರೂ ಮಕ್ಕಳಾಗಿದ್ದಾರೆ ಆದ್ದರಿಂದ ಇಂದು ಎರಡೂ ಪ್ರಕಾರದ ಮಕ್ಕಳನ್ನು ನೋಡುತ...
ಪ್ರತಿಯೊಬ್ಬ ಮಗುವಿನ ಮಸ್ತಕದಲ್ಲಿ ವಿಶೇಷವಾಗಿ ನಾಲ್ಕು ಭಾಗ್ಯದ ರೇಖೆಗಳು ಹೊಳೆಯುತ್ತವೆ. 1. ದಿವ್ಯ ಜನ್ಮದ ರೇಖೆ, 2. ಪರಮಾತ್ಮ ಪಾಲನೆಯ ರೇಖೆ. 3. ಪರಮಾತ್ಮ ವಿದ್ಯೆಯ ರೇಖೆ. 4. ನಿಸ್ವಾರ್ಥ ಸೇವೆಯ ರೇಖೆ. ಎಲ್ಲರ ಮಸ್ತಕದಲ್ಲಿ ನಾಲ್ಕೂ ಭಾಗ್ಯದ ರೇಖೆಗಳು ಹೊಳೆಯುತ್ತಿವೆ ಆದರೆ ಹೊಳಪಿನಲ್ಲಿ ಮತ್ತು ಸದಾ ಏಕರಸ ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದರಲ್ಲಿ ಅಂತರವಾಗುವ ಕಾರಣ ಹೊಳಪಿನಲ್ಲಿ ವ್...
ಹಾಗೆಯೇ ವಿದ್ಯೆಯ ರೇಖೆ - ವಿದ್ಯೆಯ ಗುರಿ-ಧ್ಯೇಯವೇ ಆಗಿದೆ, ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದು. ಶಿಕ್ಷಕ ತಂದೆಯು ಎಲ್ಲರಿಗೆ ಒಂದೇ ರೀತಿಯ ವಿದ್ಯೆಯನ್ನು ಓದಿಸುತ್ತಾರೆ, ಒಂದೇ ಸಮಯದಲ್ಲಿ ಓದಿಸುತ್ತಾರೆ ಆದರೆ ಯಾವ ಶ್ರೇಷ್ಠ ಬ್ರಾಹ್ಮಣ ಜೀವನದ ಹಾಗೂ ವಿದ್ಯೆಯ ಪದವಿ ಅಥವಾ ನಶೆಯಿದೆಯೋ ಅದು ಎಲ್ಲರಿಗೂ ಒಂದೇ ರೀತಿಯಾಗಿರುವುದಿಲ್ಲ. ಫರಿಶ್ತಾ ಸೋ ದೇವತಾ ಪದವಿಯನ್ನು ಸದಾ ಸ್ಮೃತಿಯಲ್...
ನಾಲ್ಕನೆಯದು ಸೇವೆಯ ರೇಖೆ - ಸೇವೆಯ ವಿಶೇಷತೆಯಾಗಿದೆ ಯಾವುದನ್ನು ಬ್ರಹ್ಮಾ ತಂದೆಯು ಸಾಕಾರ ರೂಪದಲ್ಲಿ, ಅಂತಿಮ ವರದಾನ ರೂಪದಲ್ಲಿ ಸ್ಮೃತಿಗೆ ತರಿಸಿದರು - ನಿರಾಕಾರಿ, ನಿರ್ವಿಕಾರಿ ಮತ್ತು ನಿರಹಂಕಾರಿ. ನಿರಾಕಾರಿ ಸ್ಥಿತಿಯಲ್ಲಿ ಸ್ಥಿತರಾಗದೇ ಯಾವುದೇ ಆತ್ಮನಿಗೆ ಸೇವೆಯ ಫಲವನ್ನು ಕೊಡಲು ಸಾಧ್ಯವಿಲ್ಲ ಏಕೆಂದರೆ ಆತ್ಮದ ಬಾಣವು ಆತ್ಮಕ್ಕೆ ನಾಟುತ್ತದೆ. ಸ್ವಯಂ ಸದಾ ಈ ಸ್ಥಿತಿಯಲ್ಲಿ ಸ್ಥಿತರಾಗಿಲ್ಲವ...
ಭಗವಂತನು ಪಾಲಕನಾಗಿದ್ದಾರೆ, ಜನ್ಮದಾತನಾಗಿದ್ದಾರೆ ಎಂದು ಪ್ರಪಂಚದವರು ಹೇಳುತ್ತಾರೆ ಆದರೆ ಜನ್ಮದಾತನ ಪರಿಚಯವೇ ಇಲ್ಲ ಮತ್ತು ತಾವು ನಶೆಯಿಂದ ಹೇಳುತ್ತೀರಿ - ಪರಮಾತ್ಮನು ನಮ್ಮ ಜನ್ಮದಾತನು ಹೇಗೆ ಮತ್ತು ಹೇಗೆ ಪಾಲಕನಾಗಿದ್ದಾರೆ! ಬ್ರಹ್ಮಾ ತಾಯಿಯ ಪಾಲನೆಯೂ ಸಿಗುತ್ತಿದೆ ಮತ್ತು ತಂದೆಯ ಶ್ರೇಷ್ಠ ಮತದಂತೆ ಯೋಗ್ಯ ಆತ್ಮರಾಗಿ ಬಿಟ್ಟಿರಿ. ತಂದೆಯು ಮಕ್ಕಳನ್ನು ಯೋಗ್ಯರನ್ನಾಗಿ ಮಾಡುತ್ತಾರೆ ಮತ್ತು ತಾಯ...
ಗೀತಾ ಪಾಠಶಾಲೆಯವರು ಹೆಚ್ಚಿಗೆ ಬಂದಿದ್ದಾರೆ. ಗೀತಾ ಪಾಠಶಾಲೆಯವರು ಯಾರಾದರು? ಗೀತಾಜ್ಞಾನವನ್ನು ಕೇಳುವಂತಹ ``ಹೇ ಅರ್ಜುನ್'' ಆಗಿದ್ದಾರೆ. ``ಅರ್ಜುನ್'' ಎಂದು ತಿಳಿದುಕೊಂಡು ಗೀತಾಜ್ಞಾನವನ್ನು ಕೇಳುತ್ತೀರೋ ಅಥವಾ ಯಾರಾದರೂ ಬೇರೆ ಅರ್ಜುನ ಇದ್ದಾರೆಯೋ? ``ನಾನು ಅರ್ಜುನನಾಗಿದ್ದೇನೆ'' ಎಂದು ತಿಳಿದುಕೊಳ್ಳುತ್ತೀರಾ? ಸದಾ ಇದನ್ನು ಅನುಭವ ಮಾಡಿ ಕೇಳಿರಿ - ನಾನು ಅರ್ಜುನನಾಗಿದ್ದೇನೆ, ನನಗೆ ವಿಶೇಷ...
ಎಲ್ಲಾ ಟೀಚರ್ಸ್ನ ಶಾಶ್ವತ ವಿಳಾಸವು ಯಾವುದಾಗಿದೆ? ಮಧುಬನವಲ್ಲವೆ. ಇದು ಮನೆಯಾಗಿದೆ, ಅದು ಅಂಗಡಿಯಾಗಿದೆ. ಹೆಚ್ಚು ಯಾವುದು ನೆನಪಿರುತ್ತದೆ? ಮನೆಯೋ ಅಥವಾ ಅಂಗಡಿಯೋ? ಕೆಲಕೆಲವರಿಗೆ ಅಂಗಡಿಯು ಹೆಚ್ಚು ನೆನಪು ಬರುತ್ತದೆ, ಮಲಗುವಾಗಲೂ ಅಂಗಡಿಯ ನೆನಪು ಬರುತ್ತದೆ. ತಾವಂತೂ ಎಲ್ಲಿ ಬೇಕೋ ಅಲ್ಲಿ ಬುದ್ಧಿಯನ್ನು ಸ್ಥಿತ ಮಾಡಬಲ್ಲಿರಿ. ಸೇವಾಕೇಂದ್ರದಲ್ಲಿದ್ದರೂ ಸಹ ಮಧುಬನ ನಿವಾಸಿಗಳಾಗಬಲ್ಲಿರಿ ಮತ್ತು ಮ...
ಕೆಲಕೆಲವರು ಶಿಕ್ಷಕಿಯರು ಹೇಳುತ್ತಾರೆ - ಯೋಗದಲ್ಲಿ ಕುಳಿತುಕೊಂಡಾಗ ಆತ್ಮಾಭಿಮಾನದಲ್ಲಿ ಆಗುವ ಬದಲು ಸೇವೆಯ ನೆನಪು ಬರುತ್ತದೆ ಆದರೆ ಈ ರೀತಿ ಆಗಬಾರದು ಏಕೆಂದರೆ ಒಂದುವೇಳೆ ಅಂತಿಮ ಸಮಯದಲ್ಲಿ ಅಶರೀರಿಯಾಗುವ ಬದಲು ಸೇವೆಯ ಸಂಕಲ್ಪ ನಡೆದರೂ ಸಹ ಸೆಕೆಂಡಿನ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಬಿಡುತ್ತೀರಿ. ಆ ಸಮಯದಲ್ಲಿ ತಂದೆಯ ನಿರಾಕಾರಿ, ನಿರ್ವಿಕಾರಿ, ನಿರಹಂಕಾರಿಯ ವಿನಃ ಮತ್ತೇನೂ ನೆನಪು ಬರಬಾರದು...
ಸರ್ವ ತಂದೆಯ ಸಮಾನ, ಸದಾ ಜ್ಞಾನಪೂರ್ಣ ಶಕ್ತಿಶಾಲಿ ಮಕ್ಕಳಿಗೆ, ಸದಾ ಭಾಗ್ಯವಿದಾತನ ಮೂಲಕ ಶ್ರೇಷ್ಠ ಭಾಗ್ಯದ ಸ್ಪಷ್ಟ ರೇಖೆಗಳನ್ನು ಹೊಂದಿರುವ ಭಾಗ್ಯವಂತ ಮಕ್ಕಳು, ಸದಾ ತಂದೆಯ ಸಮಾನ ತ್ರಿ-ವರದಾನಗಳನ್ನು ಪ್ರಾಪ್ತಿ ಮಾಡಿಕೊಂಡಿರುವ ವಿಶೇಷ ಆತ್ಮಗಳಿಗೆ, ಸದಾ ಬ್ರಾಹ್ಮಣ ಜನ್ಮದ ಪಾಲನೆ ಮತ್ತು ವಿದ್ಯೆಯನ್ನು ಹೆಚ್ಚಿಸಿಕೊಳ್ಳುವಂತಹ ಅಖಂಡ ಭಾಗ್ಯಶಾಲಿ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ...
ಮಹಾರಾಷ್ಟ್ರ ಗ್ರೂಪ್:
ತಮ್ಮನ್ನು ಸದಾ ಸರ್ವ ಪ್ರಾಪ್ತಿಗಳಿಂದ ಸಂಪನ್ನರೆಂದು ಅನುಭವ ಮಾಡುತ್ತೀರಾ? ಕೆಲವೊಮ್ಮೆ ಖಾಲಿಯಂತು ಆಗುವುದಿಲ್ಲವೇ? ಏಕೆಂದರೆ ತಂದೆಯು ಇಷ್ಟೆಲ್ಲಾ ಪ್ರಾಪ್ತಿಗಳನ್ನು ಮಾಡಿಸಿದ್ದಾರೆ. ಒಂದುವೇಳೆ ತಮ್ಮಲ್ಲಿ ಸರ್ವ ಪ್ರಾಪ್ತಿಗಳನ್ನು ಜಮಾ ಮಾಡಿಕೊಳ್ಳುತ್ತೀರೆಂದರೆ ಎಂದಿಗೂ ಖಾಲಿಯಾಗಲು ಸಾಧ್ಯವಿಲ್ಲ. ಈ ಜನ್ಮದ ಮಾತಷ್ಟೇ ಅಲ್ಲ ಆದರೆ ಅನೇಕ ಜನ್ಮಗಳಿಗಾಗಿಯೂ ಇಲ್ಲಿಂದ ಸಂಪನ್ನರಾಗಿ ಇರುತ್ತೀರಿ. ಅಂದಮ...
ಓಂ ಶಾಂತಿ. ಒಬ್ಬರು ಸದಾ ಪರಮಧಾಮದಲ್ಲಿರುವ ಸರ್ವಶ್ರೇಷ್ಠ ತಂದೆಯಾಗಿದ್ದಾರೆ, ಆ ಶಿವತಂದೆಯ ಕೆಳಗಡೆ ವಿಷ್ಣುವಿನ ಚಿತ್ರವಿದೆ. ನಮ್ಮನ್ನು ಶಿವತಂದೆಯು ವಿಷ್ಣುಪುರಿಯ ಮಾಲೀಕರನ್ನಾಗಿ ಮಾಡುತ್ತಿದ್ದಾರೆಂದು ನೀವೀಗ ತಿಳಿದುಕೊಂಡಿದ್ದೀರಿ. ವಿಷ್ಣು ಅರ್ಥಾತ್ ಲಕ್ಷ್ಮೀ-ನಾರಾಯಣ, ಇವರಿಬ್ಬರ ಕಂಬೈಂಡ್ರೂಪವು ವಿಷ್ಣುವಾಗಿದ್ದಾರೆ. ಯಾರಿಗಾದರೂ ತಿಳಿಸುವುದಕ್ಕೆ ಇದು ನಮ್ಮ ಗುರಿ-ಧ್ಯೇಯವಾಗಿದೆ. ಬುದ್ಧಿಯಲ...
ನೀವು ಮಕ್ಕಳಿಗೆ ಇದು ನಿಶ್ಚಯವಿದೆ- ಪ್ರತೀ 5000 ವರ್ಷಗಳ ನಂತರ ಸಂಗಮಯುಗದಲ್ಲಿಯೇ ಬರುತ್ತೇವೆ. ನೀವು ಮಕ್ಕಳು ರಾಜ್ಯಭಾಗ್ಯವನ್ನು ಪಡೆಯಲು ಅರ್ಥಾತ್ ಸ್ವರ್ಗದ ಮಾಲೀಕರಾಗಲು ಇಲ್ಲಿ ಬಂದಿದ್ದೀರಿ. ಇದು ನೀವು ಮಕ್ಕಳಿಗೆ ತಿಳಿದಿದೆ- ಭಾರತದಲ್ಲಿ ಕೇವಲ ಒಂದು ಧರ್ಮವಿತ್ತು, ಆ ಸಮಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ ಅಂದಮೇಲೆ ಎಷ್ಟೊಂದು ನಶೆಯೇರಬೇಕು ಮತ್ತು ದೈವೀಗುಣಗಳ ಧಾರಣೆಯನ್ನೂ ಮಾಡಿಕೊಳ್ಳಬ...
ನೀವು ಮಕ್ಕಳು ಪ್ರತಿಯೊಂದು ಧರ್ಮದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ- ಕ್ರಿಶ್ಚಿಯನ್ ಧರ್ಮವು ಯಾವಾಗ ಸ್ಥಾಪನೆಯಾಗುತ್ತದೆ, ಹೇಗೆ ಆಗುತ್ತದೆ, ಹೇಗೆ ವೃದ್ಧಿಯಾಗುತ್ತದೆ. ಈ ವೃಕ್ಷದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ- ಹೊಸಬರು ಬರುತ್ತಾರೆಂದರೆ ಅವರು ರೆಂಬೆ-ಕೊಂಬೆಗಳಿದ್ದಂತೆ. ಅದರಲ್ಲಿ ಎಷ್ಟು ಎಲೆಗಳಿರಬಹುದು? ಬಹಳ ಕಡಿಮೆಯಿರುತ್ತದೆ. ಪ್ರಜಾಪಿತ ಬ್ರಹ್ಮನನ್ನು ಗ್ರೇಟ್ ಗ್ರೇಟ್ ಗ್ರಾ...
ಈಗ ನೀವು ಮಕ್ಕಳು ಮುಳ್ಳುಗಳಿಂದ ಹೂಗಳಾಗುತ್ತಿದ್ದೀರಿ, ಈ ಮಾತನ್ನು ಉದ್ಯೋಗ-ವ್ಯವಹಾರಗಳಲ್ಲಿ ತೊಡಗಿದಾಗ ಮರೆತುಹೋಗುತ್ತೀರಿ. ಯಾರಿಗೆ ಧಾರಣೆಯಾಗುತ್ತದೆಯೋ ಅವರು ಇಡೀ ದಿನ ಹೇಗೆ ನಾವು ಸರ್ವೀಸ್ ಮಾಡುವುದು ಅಥವಾ ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವುದು ಎಂದು ವಿಚಾರ ಸಾಗರ ಮಂಥನ ಮಾಡುತ್ತಾ ಇರುತ್ತಾರೆ. ತಂದೆಯು ಎಲ್ಲರಿಗಿಂತ ದೊಡ್ಡ ಧರ್ಮಾತ್ಮನಾಗಿದ್ದಾರೆ, ಅವರು ಸಾಧು-ಸಂತರ ಉದ್ಧಾರವನ್ನು ಮಾಡ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಮ್ಮ ಬುದ್ಧಿಯನ್ನು ಹದ್ದಿನಿಂದ ತೆಗೆದು ಬೇಹದ್ದಿನಲ್ಲಿ ಇಟ್ಟುಕೊಳ್ಳಬೇಕಾಗಿದೆ, ಅನ್ಯರನ್ನೂ ಬೇಹದ್ದಿನಲ್ಲಿ ತರಬೇಕಾಗಿದೆ. ಈ ಹಳೆಯ ಪ್ರಪಂಚದಿಂದ ಮನಸ್ಸನ್ನು ತೆಗೆಯಬೇಕಾಗಿದೆ.
2. ಸದಾ ಖುಷಿಯಲ್ಲಿರಲು ಧಾರಣೆ ಮಾಡಬೇಕು ಮತ್ತು ಮಾಡಿಸಬೇಕಾಗಿದೆ. ನಮಗೆ ಭಗವಂತ ಓದಿಸುತ್ತಾರೆ ಎಂಬ ನಶೆಯನ್ನಿಟ್ಟುಕೊಳ್ಳಬೇಕಾಗಿದೆ.
ಓಂ ಶಾಂತಿ. ಮಕ್ಕಳು ಗೀತೆಯ ಸಾಲನ್ನು ಕೇಳಿದಿರಾ? ಈಗ ತಂದೆಯು ಬಂದು ಪುರುಷೋತ್ತಮರಾಗುವ ಎಷ್ಟು ಒಳ್ಳೆಯ ಮಾರ್ಗವನ್ನು ತಿಳಿಸುತ್ತಾರೆ. ಪ್ರಪಂಚದಲ್ಲಿಯೂ ಅನೇಕ ಪ್ರಕಾರದ ಕಾಲೇಜು, ವಿಶ್ವ ವಿದ್ಯಾಲಯಗಳಿವೆ, ಅಲ್ಲಿಯೂ ಪದವಿಗಾಗಿ ಓದುತ್ತಾರೆ. ಕೆಲವರು ಕಾರ್ಯದರ್ಶಿ, ಕೆಲವರು ನ್ಯಾಯಾಧೀಶರು, ಕೆಲವರು ದಂಡಾಧಿಕಾರಿಗಳಾಗುತ್ತಾರೆ. ಉತ್ತಮ ಪದವಿಯನ್ನೂ ಪಡೆಯುತ್ತಾರೆ ಆದರೆ ಅವೆಲ್ಲವೂ ಕಲಿಯುಗಕ್ಕಾಗಿ ಉತ...
ಸಿನಿಮಾ ನೋಡುವುದು ಬಹಳ ಕೆಟ್ಟದ್ದಾಗಿದೆ. ಪತ್ರಿಕೆಗಳಲ್ಲಿಯೂ ಬಂದಿತ್ತು - ಸಿನಿಮಾ ನೋಡಲು ಹೋಗುವುದು ಎಂದರೆ ನರಕದಲ್ಲಿ ಬೀಳುವುದು. ಎಷ್ಟು ದೊಡ್ಡ ವ್ಯಕ್ತಿಗಳಿರುವರೋ ಅಷ್ಟೇ ಕೊಳಕು ಮಾಡುತ್ತಾರೆ. ಈ ಸಮಯದಲ್ಲಿ ಸಂಪೂರ್ಣ ವೇಶ್ಯಾಲಯವಾಗಿದೆ. ತಂದೆಯು ಬಂದು ಶಿವಾಲಯವನ್ನಾಗಿ ಮಾಡುತ್ತಾರೆ, ಎಲ್ಲವೂ ಪವಿತ್ರತೆಯ ಮೇಲೆ ಆಧಾರಿತವಾಗಿದೆ. ಪವಿತ್ರತೆಯಿದ್ದಾಗ ಸುಖ, ಶಾಂತಿ, ಪವಿತ್ರತೆಯು ಇರುತ್ತದೆ, ರ...
ಈಗ ತಂದೆಯು ಹೇಳುತ್ತಾರೆ - ಮಕ್ಕಳೇ, ಇಂತಹ ಯಾವುದೇ ಕೆಟ್ಟ ಕರ್ಮ ಮಾಡಬೇಡಿ, ಯಾವುದರಿಂದ ಶಿಕ್ಷೆಯನ್ನನುಭವಿಸಬೇಕಾಗುವುದು. ಆದರೂ ಅಂತಹ ಕರ್ಮ ಮಾಡುತ್ತೀರೆಂದರೆ ಪದವಿಯೂ ಅಂತಹುದೇ ಸಿಗುವುದು. ಒಂದುವೇಳೆ ಚೆನ್ನಾಗಿ ಓದುತ್ತೀರೆಂದರೆ ಕಲ್ಪ-ಕಲ್ಪಾಂತರದ ಪ್ರಾಲಬ್ಧವಾಗುವುದು. ಈಗ ಜ್ಞಾನವಿರುತ್ತದೆ ನಂತರ ಪ್ರಾಯಲೋಪವಾಗಿ ಬಿಡುವುದು. ನೀವೀಗ ಪುರುಷಾರ್ಥ ಮಾಡದಿದ್ದರೆ ಬಹಳ ಪಶ್ಚಾತ್ತಾಪ ಪಡುತ್ತೀರಿ. ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಮ್ಮ ಶ್ರೇಷ್ಠ ಪ್ರಾಲಬ್ಧವನ್ನು ರೂಪಿಸಿಕೊಳ್ಳಲು ವಿದ್ಯೆಯನ್ನು ಚೆನ್ನಾಗಿ ಓದಬೇಕಾಗಿದೆ. ಯಾವುದೇ ಕೆಟ್ಟ ಕರ್ಮ ಮಾಡಬಾರದು.
2. ತಮ್ಮ ಆಹಾರ-ಪಾನೀಯಗಳು ಬಹಳ ಶುದ್ಧವಾಗಿರಲಿ. ದೇವತೆಗಳಿಗೆ ಯಾವ ಪದಾರ್ಥಗಳನ್ನು ಸ್ವೀಕಾರ ಮಾಡಿಸುತ್ತಾರೆಯೋ ಅಂತಹ ಪಧಾರ್ಥಗಳನ್ನೇ ಸೇವಿಸಬೇಕು. ಪುರುಷೋತ್ತಮರಾಗುವ ಪುರುಷಾರ್ಥ ಮಾಡಬೇಕಾಗಿದೆ.
ಓಂ ಶಾಂತಿ. ಮಕ್ಕಳಿಗೆ ಗುಡ್ಮಾರ್ನಿಂಗ್. ಇಂದು ಗುರುವಾರವಾಗಿದೆ, ನೀವು ಮಕ್ಕಳಿಗಾಗಿ ಈ ವೃಕ್ಷಪತಿ ದಿನ ಅಥವಾ ಬೃಹಸ್ಪತಿ ವಾರವು ಉತ್ತಮವಾಗಿದೆ. ಸಪ್ತಾಹದಲ್ಲಿ ಎಲ್ಲದಕ್ಕಿಂತ ಉತ್ತಮವಾದ ದಿನವು ಇದಾಗಿದೆ. ವೃಕ್ಷಪತಿಯ ಹೆಸರು ಗಾಯನವಿದೆ. ಬೃಹಸ್ಪತಿಯ ದೆಶೆಯು ಕುಳಿತಿದೆ. ವೃಕ್ಷಪತಿ ತಂದೆಯು ಪುನಃ ನಮಗೆ ತಮ್ಮ ಬೇಹದ್ದಿನ ಸುಖದ ಆಸ್ತಿಯನ್ನು ಕೊಡುತ್ತಿದ್ದಾರೆ, ಬೇಹದ್ದಿನ ಸನ್ಯಾಸವನ್ನೂ ಮಾಡುತ್ತಾ...
ನೀವೇ ಪಾವನ, ಶ್ರೇಷ್ಠರಾಗಿದ್ದೀರಿ, ನೀವು ಪತಿತರಾಗಿ ಕೆಳಗೆ ಬಂದಿದ್ದೀರಿ. ನಾಟಕವೇ ಭಾರತದ ಮೇಲಿದೆ. 84 ಜನ್ಮಗಳ ಕಥೆಯು ನಿಮ್ಮೊಂದಿಗೆ ಅನ್ವಯಿಸುತ್ತದೆ. ಯಾರು ಕೃಷ್ಣನ ರಾಜಧಾನಿಯಲ್ಲಿ ಮೊದಲಿಗೆ ಬರುವರೋ ಅವರೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಈಗ ಸ್ವರ್ಗ, ಕೃಷ್ಣ ಪುರಿಯು ಸ್ಥಾಪನೆಯಾಗುತ್ತಿದೆ ಎಂಬುದು ಯಾರಿಗೂ ತಿಳಿದಿಲ್ಲ. ನೀವು ಸ್ಪಷ್ಟ ಮಾಡಿ ಬರೆಯಬಹುದು. ನಾವು ಯೋಗಬಲದಿಂದ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈ ಸಮಯದಲ್ಲಿ ಸ್ವಯಂನ್ನು ವನವಾಸದಲ್ಲಿದ್ದೇವೆಂದು ತಿಳಿದುಕೊಳ್ಳಬೇಕು. ಒಳ್ಳೆಯ ಉಡುಗೆ, ಆಭರಣಗಳನ್ನು ತೊಡುವ ಆಸಕ್ತಿಯನ್ನು ಬಿಡಬೇಕಾಗಿದೆ. ಸಾಧಾರಣವಾಗಿದ್ದರೂ ಚಲನೆಯನ್ನು ಬಹಳ ರಾಯಲ್ ಆಗಿ ಇಟ್ಟುಕೊಳ್ಳಬೇಕಾಗಿದೆ.
2. ಎಂದೂ ಮುಟ್ಟಿದರೆ ಮುನಿಯಾಗಬಾರದು. ಬಾಯಿಂದ ಕಟುವಾದ ಮಾತುಗಳನ್ನು ಮಾತನಾಡಬಾರದು. ಸಂಜೀವಿನಿ ಮೂಲಿಕೆಯಿಂದ ಮಾಯಾಜೀತರಾಗಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಗುಡ್ಮಾರ್ನಿಂಗ್. ತಂದೆಯು ಇಷ್ಟು ನಶೆಯಿಂದ ಮಕ್ಕಳಿಗೆ ಗುಡ್ಮಾರ್ನಿಂಗ್ ಹೇಳಿದರೆ ಆದರೆ ಮಕ್ಕಳು ಪ್ರತ್ಯುತ್ತರ ನೀಡಲಿಲ್ಲ. ಮಕ್ಕಳಂತೂ ಇನ್ನೂ ಮೇರು ಧ್ವನಿಯಿಂದ ಹೇಳಬೇಕಾಗಿದೆ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಗುಡ್ಮಾರ್ನಿಂಗ್ ಹೇಳುತ್ತಾರೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ, ನಾವು ಈ ಶರೀರದ ಮೂಲಕ ಆತ್ಮಿಕ ತಂದೆಗೆ ಗುಡ್ಮಾರ್ನಿಂಗ್ ಹೇಳ...
ತಂದೆಯು ಪತಿತರನ್ನು ಪಾವನ ಮಾಡುವುದಕ್ಕಾಗಿ ಬರುತ್ತಾರೆ. ಅವರು ಬಂದು ಸಹಜ ಮಾರ್ಗವನ್ನು ತಿಳಿಸುತ್ತಾರೆ - ಆತ್ಮವನ್ನು ಪಾವನ ಮಾಡಿಕೊಳ್ಳಲು ನನ್ನನ್ನು ನೆನಪು ಮಾಡಿರಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ತಂದೆಯೇ ಪಾವನರನ್ನಾಗಿ ಮಾಡಲು ಶ್ರೀಮತ ಕೊಡುತ್ತಾರೆ, ನನ್ನನ್ನು ನೆನಪು ಮಾಡಿರಿ. ಆದರೆ ಅವರು ನಿರಾಕಾರನಾಗಿರುವುದರಿಂದ ಅವಶ್ಯವಾಗಿ ಸಾಕಾರದಲ್ಲಿ ಬಂದು ಶ್ರೀಮತ ಕೊಡುತ್ತಾರೆ. ತಂದೆಯು ತಿಳಿಸ...
ತಂದೆಯು ತಿಳಿಸುತ್ತಾರೆ - ಚಿತ್ರಗಳನ್ನು ನೋಡುತ್ತಿದ್ದಂತೆಯೇ ಆಕರ್ಷಣೆ ಮಾಡುವಂತಿರಲಿ. ಅಂತಹ ಚಿತ್ರಗಳನ್ನು ಮಾಡಿಸಿರಿ. ಪತ್ರಿಕೆಗಳಲ್ಲಿ ಎಷ್ಟೊಂದು ಚಿತ್ರಗಳು ಮುದ್ರಿತವಾಗುತ್ತವೆ, ನಿಮ್ಮ ಚಿತ್ರಗಳು ಅದರಲ್ಲಿ ಬರುವುದಿಲ್ಲ. ತಂದೆಯು ನೀವು ಮಕ್ಕಳನ್ನು ಬುದ್ಧಿಹೀನರಿಂದ ಬುದ್ಧಿವಂತರನ್ನಾಗಿ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರನ್ನು ಬುದ್ಧಿವಂತರನ್ನಾಗಿ ಯಾರು ಮಾಡಿದರು? ತಂದೆಯು ಯೋಗದ ಮೂಲಕ ಈ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಹೇಗೆ ಬ್ರಹ್ಮಾ ತಂದೆಯು ಸಮರ್ಪಿತರಾದರೋ ಹಾಗೆಯೇ ಫಾಲೋ ಫಾದರ್ ಮಾಡಬೇಕಾಗಿದೆ. ತಮ್ಮದೆಲ್ಲವನ್ನೂ ಈಶ್ವರಾರ್ಥವಾಗಿ ಅರ್ಪಣೆ ಮಾಡಿ ಟ್ರಸ್ಟಿಯಾಗಿ ಮಮತ್ವವನ್ನು ಕಳೆಯಬೇಕಾಗಿದೆ.
2. ಲಾಸ್ಟ್ ನಲ್ಲಿ ಬಂದರೂ ಫಾಸ್ಟ್ ಹೋಗಲು ನೆನಪು ಮತ್ತು ವಿದ್ಯೆಯಲ್ಲಿ ಸಂಪೂರ್ಣ ಗಮನ ಕೊಡಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಈ ಗೀತೆಯು ನಿಮಗಾಗಿ ವಜ್ರ ಸಮಾನವಾಗಿದೆ ಮತ್ತು ಯಾರು ರಚಿಸಿದ್ದಾರೆಯೋ ಅವರಿಗಾಗಿ ಕವಡೆಯಂತಾಗಿದೆ ಏಕೆಂದರೆ ಅವರು ಕೇವಲ ಗಿಳಿ ಪಾಠದಂತೆ ಹಾಡುತ್ತಾರೆ, ಅರ್ಥವೇನೂ ತಿಳಿದುಕೊಂಡಿಲ್ಲ, ನೀವು ಅರ್ಥವನ್ನು ತಿಳಿದುಕೊಂಡಿದ್ದೀರಿ. ಈಗ ಆ ದಿನವು ಬಂದಿದೆ ಯಾವಾಗ ಕಲಿಯುಗವು ಬದಲಾಗಿ ಸತ್ಯಯುಗ, ಪತಿತ ಪ್ರಪಂಚವು ಬದಲಾಗಿ ಪಾವನ ಪ್ರಪಂಚ...
ಯಾವಾಗ ಪತಿತ ಪ್ರಪಂಚದ ವಿನಾಶವಾಗಬೇಕಾಗಿದೆಯೋ ಆಗಲೇ ತಂದೆಯು ಬರುತ್ತಾರೆ. ಮೊದಲು ಸ್ಥಾಪನೆ ನಂತರ ವಿನಾಶ ಎಂಬ ಪದವನ್ನು ಅರ್ಥ ಸಹಿತವಾಗಿ ಬರೆಯಬೇಕಾಗುತ್ತದೆ. ಸ್ಥಾಪನೆ, ಪಾಲನೆ, ವಿನಾಶ ಎಂದಲ್ಲ. ಸ್ಥಾಪನೆ, ವಿನಾಶ ನಂತರ ಪಾಲನೆ. ನಾವು ಓದಿ ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಇದು ಬುದ್ಧಿಯಲ್ಲಿ ಚೆನ್ನಾಗಿ ಕುಳಿತುಕೊಂಡಿರಬೇಕು. ಕೆಲವು ಮಕ್ಕಳು ಭಲೆ ಚ...
ಈಗ ನೀವು ಮಕ್ಕಳು ಈ ಪ್ರಪಂಚದಲ್ಲಿ ಏನೇನಿದೆ ಮತ್ತು ಸತ್ಯಯುಗದಲ್ಲಿ ಏನೇನಿರುವುದು ಎಂಬುದೆಲ್ಲವನ್ನೂ ತಿಳಿದುಕೊಂಡಿದ್ದೀರಿ. ಕೇವಲ ಭಾರತ ಖಂಡವೇ ಇರುತ್ತದೆ, ಅದು ಚಿಕ್ಕದಾಗಿರುತ್ತದೆ, ಉಳಿದೆಲ್ಲರೂ ಪರಮಧಾಮಕ್ಕೆ ಹೊರಟು ಹೋಗುತ್ತಾರೆ. ಇನ್ನು ಸ್ವಲ್ಪವೇ ಸಮಯ ಉಳಿದಿದೆ, ಇದೇನೂ ಇರುವುದಿಲ್ಲ. ನೀವು ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ, ನಿಮಗಾಗಿ ಹಳೆಯ ಪ್ರಪಂಚದ ವಿನಾಶವೂ ಮೊದಲೇ ನಿ...
ಬಹಳಷ್ಟು ಜ್ಞಾನವಿದೆ ಆದರೆ ಸತೋಪ್ರಧಾನ ಬುದ್ಧಿಯವರು ಕೂಡಲೇ ತಿಳಿದುಕೊಳ್ಳುತ್ತಾರೆ, ಕೆಲವರು ರಜೋ, ಕೆಲವರು ತಮೋ ಬುದ್ಧಿಯವರಿದ್ದಾರೆ. ಇಲ್ಲಿ ತರಗತಿಯಲ್ಲಿ ನಂಬರ್ವಾರ್ ಕುಳ್ಳರಿಸುವುದಿಲ್ಲ, ಹಾಗೆ ಮಾಡಿದ್ದೇ ಆದರೆ ಹೃದಯಾಘಾತವಾಗಿ ಬಿಡುವುದು. ಡ್ರಾಮಾ ಪ್ಲಾನನುಸಾರ ರಾಜಧಾನಿಯು ಪೂರ್ಣ ಸ್ಥಾಪನೆಯಾಗುತ್ತಿದೆ, ನಂತರ ಸತ್ಯಯುಗದಲ್ಲಿ ತಂದೆಯು ಓದಿಸುವರೇ! ತಂದೆಯ ವಿದ್ಯೆಯು ಇದೊಂದೇ ಸಮಯ ನಡೆಯುತ್ತ...
ಮಕ್ಕಳು ಅನೇಕರ ಕಲ್ಯಾಣ ಮಾಡಬೇಕಾಗಿದೆ, ನಿಮ್ಮದೆಲ್ಲವೂ ಗುಪ್ತವಾಗಿದೆ. ಇಲ್ಲಿ ನೀವು ಬ್ರಹ್ಮಾಕುಮಾರ-ಕುಮಾರಿಯರು ತಮಗಾಗಿ ಸ್ವರ್ಗದ ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ. ಇದೂ ಸಹ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ನಿಮ್ಮಲ್ಲಿಯೂ ಮರೆತು ಹೋಗುತ್ತಾರೆ ಅಂದಮೇಲೆ ಅನ್ಯರು ಹೇಗೆ ತಿಳಿದುಕೊಳ್ಳುವರು. ನೀವಿದನ್ನು ಮರೆಯದಿದ್ದರೆ ಸದಾ ಖುಷಿಯಲ್ಲಿರುತ್ತೀರಿ. ಮರೆಯುವ...
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಅಪಾರ ಸುಖದ ಅನುಭವ ಮಾಡಲು ತಂದೆಯು ಏನನ್ನು ಓದಿಸುತ್ತಾರೆಯೋ ಅದನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ, ವಿಚಾರ ಸಾಗರ ಮಂಥನ ಮಾಡಬೇಕಾಗಿದೆ.
2. ಈ ಸ್ಮಶಾನವನ್ನು ನೋಡಿಯೂ ನೋಡದಂತಿರಬೇಕಾಗಿದೆ. ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ...... ಹೊಸ ಪ್ರಪಂಚಕ್ಕೆ ಯೋಗ್ಯರಾಗಬೇಕಾಗಿದೆ.